Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ತಮಿಳುನಾಡು ಮೀನುಗಾರರಿಂದ ಕಲ್ಲು ತೂರಾಟ: ಮಂಗಳೂರು ಮೀನುಗಾರರಿಂದ ದೂರು

ತಮಿಳುನಾಡು ಮೀನುಗಾರರಿಂದ ಕಲ್ಲು ತೂರಾಟ: ಮಂಗಳೂರು ಮೀನುಗಾರರಿಂದ ದೂರು

0
91

ಮಂಗಳೂರಿನ ಮೀನುಗಾರ ಬೋಟುಗಳ ಮೇಲೆ ಕಲ್ಲು ಎಸೆದು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರರು ದೂರು ನೀಡಿದ್ದಾರೆ. ಮಂಗಳೂರಿನ ಬೋಟ್‌ಗಳ ಮೇಲೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಕಲ್ಲು ತೂರಾಟ
ನಡೆಸಲಾಗಿತ್ತು. ಕಲ್ಲು ತೂರಾಟದ ಪರಿಣಾಮ ಮಂಗಳೂರಿನ ಬೋಟ್‌ಗಳಲ್ಲಿದ್ದ ಏಳೆಂಟು ಮಂದಿ ಮೀನುಗಾರರು ಗಾಯಗೊಂಡಿದ್ದರು.
ಫೆ.8ರಂದು. 7-8 ಅಡಿ ಆಳದಲ್ಲಿ ಮೀನುಗಾರಿಗೆ ತೆರಳಿದ್ದ ಮಂಗಳೂರಿನ ಬೋಟುಗಳನ್ನು ಸುತ್ತುವರಿದು ಹಿಗ್ಗಾಮುಗ್ಗಾ ಕಲ್ಲುಗಳನ್ನು ಎಸೆಯುವ ಮೂಲಕ ಈ ದಾಳಿ ನಡೆಸಿದ್ದರು.ಮಂಗಳೂರಿನಿಂದ ತೆರಳಿದ್ದ ಬೋಟ್‌ಗಳನ್ನು ಸಮುದ್ರದ ಮಧ್ಯೆ ತಮಿಳು
ಮಾತನಾಡುತ್ತಿದ್ದ ಮೀನುಗಾರರಿದ್ದ ಹತ್ತಾರು ಬೋಟ್‌ಗಳು ಸುತ್ತುವರಿದಿದ್ದವು. ಈ ವೇಳೆ ಆ ಬೋಟ್‌ಗಳಲ್ಲಿ ಇದ್ದ ಕೆಲವರು ಮಂಗಳೂರಿನ ಬೋಟ್‌ಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಕೃತ್ಯದ ಬಗ್ಗೆ ಮೀನುಗಾರರು ದೂರು ನೀಡಿದ್ದಾರೆ.

Previous articleಚುನಾವಣೆ ಸಮಯದಲ್ಲಿ ದುಡ್ಡು ಹೊಡೆಯಲು ಸರ್ಕಾರದಿಂದ ತರಾತುರಿ ಟೆಂಡರ್..!
Next articleಹಣ ಪಾವತಿಸಿ ಹಣ ವಾಪಸ್‌ ಪಡೆಯುವುದೇ ಬಿಜೆಪಿ ಸೂತ್ರ