ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಲು ಸೂಚನೆ : ಕಪ್ಪು ಪಟ್ಟಿ ಧರಿಸಿ ರೈತರ ಪ್ರತಿಭಟನೆ

0
34

ಶ್ರೀರಂಗಪಟ್ಟಣ : ತಮಿಳುನಾಡಿಗೆ 15 ದಿನಗಳ ವರೆಗೆ ಪ್ರತೀನಿತ್ಯ 5000 ಕ್ಯೂಸೆಕ್ ನೀರು ಬಿಡಲು ಆದೇಶ ಹೊರಡಿಸಿರುವ ಕಾವೇರಿ ನಿಯಂತ್ರಣ ಸಮಿತಿಯ ಸೂಚನೆಯನ್ನು ಖಂಡಿಸಿ ತಾಲ್ಲೂಕಿನ ಕೆಆರ್ ಎಸ್ ಕನ್ನಂಬಾಡಿ ಅಣೆಕಟ್ಟೆ ಬಳಿ ನೂರಾರು ರೈತರು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ‌ ನಡೆಸಿದರು.


ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಭೂಮಿತಾಯಿ ಹೋರಾಟ ಸಮಿತಿ‌ ಅಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿ‌ ಅಣೆಕಟ್ಟೆ ಎದರು ಪ್ರತಿಭಟನೆ ನಡೆಸಿದ ನೂರಾರು ರೈತ ಮುಖಂಡರು, ಇದೊಂದು ಅವೈಜ್ಞಾನಿಕ ನಿರ್ಣಯ. ರಾಜ್ಯದಲ್ಲಿ ಬರಗಾಲದ ಸನ್ನಿವೇಶ ಸೃಷ್ಟಿಯಾಗಿ, ಕುಡಿಯುವ ನೀರಿಗೂ‌ ಆಹಾಕಾರ ಎದುರಾಗಿದ್ದರೂ ತಮಿಳುನಾಡಿಗೆ ನೀರು ಬಿಡಬೇಕೆಂಬ ಕಾವೇರಿ ನಿಯಂತ್ರಣ ಸಮಿತಿ ಹಾಗೂ ಇಲ್ಲಿನ ವಾಸ್ತವತೆಯನ್ನು ನ್ಯಾಯಾಲಯ ಮತ್ತು ಸಮಿತಿಗೆ ಮನದಟ್ಟು ಮಾಡಿಕೊಡದ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು‌ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

Previous articleಯಲ್ಲಪ್ಪ ಹೆಗ್ಗಡೆ ಮೇಲಿನ ಹಲ್ಲೆ ಖಂಡಿಸಿ ರೈತ ಸಂಘದಿಂದ ರಸ್ತಾ ರೋಖೋ
Next articleದಸರಾ ಇನ್ನಷ್ಟು ನಾದಮಯವಾಗಲಿ