ಡಿಕೆ ಶಿವಕುಮಾರ್‌ಗೆ ಬಿಗ್‌ ರಿಲೀಫ: ನಾಮಪತ್ರ ಅಂಗೀಕೃತ

0
16
DKC

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಶುಕ್ರವಾರ ನಾಮಪತ್ರ ಪರಿಶೀಲನೆಗೆ ರಾಜ್ಯ ಚುನಾವಣಾ ಆಯೋಗ ಮುಂದಾಗಿದ್ದು, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಸಲ್ಲಿಸಿರುವ ತಮ್ಮ ಉಮೇದುವಾರಿಕೆ ಅಂಗೀಕಾರವಾಗಿದೆ. ಇದರಿಂದ ಅವರ ಉಮೇದುವಾರಿಕೆ ತಿರಸ್ಕಾರವಾಗುವ ಬೀತಿಯಿಂದ ಬಿಗ್‌ ರಿಲೀಫ್ ಸಿಕ್ಕಿದೆ
ನಾಮಪತ್ರ ಸಲ್ಲಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ಅವರ ಉಮೇದುವಾರಿಕೆ ತಿರಸ್ಕಾರಕ್ಕೆ ಕಾರಣವಾಗುತ್ತದೆ. ಇದೇ ಭೀತಿಯಿಂದಾಗಿ ಡಿಕೆ ಶಿವಕುಮಾರ್ ಅವರು ತಮ್ಮ ಸಹೋದರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿಕೆ ಸುರೇಶ್ ಅವರಿಂದಲೂ ಕನಕಪುರ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದ್ದರು.

Previous articleಕೋರ್ಟಿನ ಆವರಣದಲ್ಲೇ ಗುಂಡಿನ ದಾಳಿ: ಮಹಿಳೆಯ ಸ್ಥಿತಿ ಗಂಭೀರ
Next articleಮೋದಿ ಕರೆ: ಗೆಲುವಿನ ಭರವಸೆ ನೀಡಿದ ಈಶ್ವರಪ್ಪ