ನವದೆಹಲಿ: ವಿಶ್ವಾದ್ಯಂತ ವಾಟ್ಸಪ್ ಮತ್ತು ಫೇಸ್‌ಬುಕ್ ಮೆಸೇಂಜರ್ ಸೇವೆಯಲ್ಲಿ ವ್ಯತ್ಯಯವಾಗಿದೆ ಸಾಮಜಿಕ ಜಾಲತಾಣದಲ್ಲಿ ಫೇಸ್‌ಬುಕ್, ವಾಟ್ಸಪ್ ಡೌನ್ ಕುರಿತಂತೆ ಟ್ರೆಂಡ ಆಗಿದೆ.
ಹಲವು ಬಳಕೆದಾರರು ವಾಟ್ಸಪ್‌ನಲ್ಲಿ ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡುತ್ತಿದ್ದಾರೆ.
ವಾಟ್ಸಾಪ್ ಸ್ಥಗಿತ ವರದಿ ಮಾಡುವ ಪೋರ್ಟಲ್ ಡೌನ್ ಡಿಟೆಕ್ಟರ್ ಸಾವಿರಾರು ಸಂಖ್ಯೆಯಲ್ಲಿ ದೂರುಗಳನ್ನು ಸ್ವೀಕರಿಸಿದೆ, ಹೆಚ್ಚಿನ ಬಳಕೆದಾರರು ಸಂಪರ್ಕಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ
ಹಿಂದಿನ ಕೆಲವು ಗಂಟೆಗಳು ಕಾಲ , ವಾಟ್ಸಾಪ್, ಫೇಸ್ಬುಕ್, ಮತ್ತು ಇನ್‌ಸ್ಟಾಗ್ರಾಂ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು, ಆದರೆ ಇವುಗಳ ಬಗ್ಗೆ ಯಾವುದೇ ಇತ್ತೀಚಿನ ವರದಿಗಳು ಲಭ್ಯವಿಲ್ಲ,ಹಾಗೂ ಫೇಸ್‌ಬುಕ್, ವಾಟ್ಸಪ್ ಡೌನ್ ಆಗಿದ್ದಕ್ಕೆ ಇಲ್ಲಿಯವರೆಗೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.