ಟ್ರಂಪ್ ಹೇಳಿದ್ದು ಹಾಗಾದ್ರೆ ಸುಳ್ಳಾ…?

0
27

ಮಂಗಳೂರು: ಕದನ ವಿರಾಮ ಆಗಿದ್ದು ಪ್ರಪಂಚಕ್ಕೆ ಗೊತ್ತಾಗಿದ್ದು ಟ್ರಂಪ್ ಹೇಳಿದ ಮೇಲೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕದನ ವಿರಾಮ ಯಾಕೆ ಆಯ್ತು? ದೇಶದ ಜನರು ಸ್ಪಷ್ಟ ಉತ್ತರ ಬಯಸುತ್ತಿದ್ದಾರೆ, ಕದನ ವಿರಾಮ ಆಗಿದ್ದು ಪ್ರಪಂಚಕ್ಕೆ ಗೊತ್ತಾಗಿದ್ದು ಟ್ರಂಪ್ ಹೇಳಿದ ಮೇಲೆ, ಟ್ರಂಪ್ ಘೋಷಣೆ ಮಾಡಿದ್ದು ಸತ್ಯ, ಘೋಷಣೆ ಆದ ನಂತರ ಕದನ ವಿರಾಮ ಘೋಷಣೆ ಆದದ್ದು ಸತ್ಯ, ನಂತರ ಪಾಕಿಸ್ತಾನ ಕೂಡ ಹೇಳಿತು ನಮ್ಮ ದೇಶವೂ ಹೇಳಿತು, ಪ್ರಧಾನಿ ಏನು ಹೇಳಿದ್ದಾರೆ ಅದನ್ನು ನಾವು ಬಯಸುತ್ತಿದ್ದೇವೆ, ಟ್ರಂಪ್ ಅಂತ ಹೆಸರು ಹೇಳುದಕ್ಕೆ ಮೋದಿ ಭಯ ಪಡುತ್ತಾರೆ, ಅವಾಗಲೇ ನಮ್ಮ ದೇಶದವರು ಹೇಳಬೇಕಿತ್ತು,
ಟ್ರಂಪ್ ಹೇಳಿದ್ದು ಹಾಗಾದ್ರೆ ಸುಳ್ಳಾ? ಪ್ರಧಾನಿಗಳು ಇದಕ್ಕೆ ಮೊದಲು ಉತ್ತರ ಕೊಡಲಿ ಅಂತ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಾರೆ. 56 ಇಂಚು ಎದೆ ಇರುವ ಮೋದಿ ಟರ್ಕಿ ಬಗ್ಗೆ ಟೀಕೆ ಮಾತನಾಡುತ್ತರೆ, ಅದ್ರೆ ಚೈನಾ ವೆಪನ್ ಪಾಕಿಸ್ತಾನ ಯೂಸ್ ಮಾಡುತ್ತೆ ಚೈನಾ ಬಗ್ಗೆ ಮಾತಾಡಲ್ಲ, ಅಜರ್ ಬೈಜಾನ್ ಹಾಗೂ ಟರ್ಕಿ ಜೊತೆ ವ್ಯಾಪಾರ ನಿಲ್ಲಿಸುತ್ತಾರೆ, ಆದ್ರೆ ಟ್ರಂಪ್ ಬಗ್ಗೆ ಮಾತಾಡಲ್ಲ ಎಂದರು.

ರೌಡಿ ಶೀಟರ್ ಸುಧಾರಣೆ ಆಗೋ ವಿಚಾರವೂ ಇರುತ್ತಲ್ಲ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಗಾದಿಗೆ ಮಾಜಿ ರೌಡಿ ಶೀಟರ್ ಆಯ್ಕೆ ವಿಚಾರವಾಗಿ ಮಾತನಾಡಿ ಸುಹಾಸ್ ಶೆಟ್ಟಿ ರೌಡಿ ಶೀಟರ್ ವಿಚಾರ ಬೇರೆ ಈ ವಿಚಾರ ಬೇರೆ, ಹರೀಶ್ ಮಾಜಿ ರೌಡಿಶೀಟರ್ ಆಗಿರುವುದರಿಂದ ಅವರು ಸುಧಾರಣೆಯಾಗಿರುವ ಸಾಧ್ಯತೆ ಇದೆ, ಒಮ್ಮೆ ರೌಡಿಶೀಟರ್ ಆದವರು ಜೀವನದುದ್ದಕ್ಕೂ ಆದೇ ಆಗಿ ಮುಂದುವರಿಯಬೇಕು ಅಂತೇನೂ ಇಲ್ಲವಲ್ಲ, ರೌಡಿಶೀಟರ್ ಗಳು ಸಂಪೂರ್ಣವಾಗಿ ಬದಲಾಗಿ ಮೂಲವಾಹಿನಿಗೆ ಬರಲು ಪ್ರಯತ್ನಿಸಿದರೆ ತಡೆಯಲಾದೀತೇ, ರೌಡಿ ಶೀಟರ್ ಎಂದೇ ಹೇಳಿಕೊಂಡು ಹೋಗೋದು ಬೇಡ, ಆ ವಿಚಾರದಲ್ಲಿ ನನಗೂ ಆಕ್ಷೇಪಗಳಿವೆ ಚುನಾವಣೆಯಾದ ರೀತಿ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ನನಗೆ ಸಮಾಧಾನವಿಲ್ಲ ಮುಂದೆ ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು

Previous articleಪುನೀತ್‌ ಕೆರೆಹಳ್ಳಿಗೆ ಕೊಲೆ ಬೆದರಿಕೆ : ಎಫ್‌ಐಆರ್ ದಾಖಲು
Next articleಬಿಜೆಪಿಯಿಂದ ಹುಬ್ಬಳ್ಳಿಯಲ್ಲಿ ಬೃಹತ್ ತಿರಂಗಾ ಯಾತ್ರೆ