ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

0
17

ಉಡುಪಿ: ವಿಚಾರಣಾ ದಿನದಂದೇ ವಿಚಾರಣಾಧೀನ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಬ್‌ಜೈಲ್‌ನಲ್ಲಿ ನಡೆದಿದೆ.
ಕಾರ್ಕಳ ಮೂಲದ ಸದಾನಂದ ಸೇರಿಗಾರ್‌ ಆತ್ಮಹತ್ಯೆ ಮಾಡಿಕೊಂಡ ಕೈದಿ. ಇಂದು ಬೆಳಿಗ್ಗೆ 20 ಮಂದಿ ಕೈದಿಗಳಿದ್ದ ಕೊಠಡಿಯಲ್ಲಿ ಪಂಚೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಸಹ ಕೈದಿಗಳು ಗಮನಿಸಿ, ನೇಣಿನ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಆರೋಪಿ ಸಾವನ್ನಪ್ಪಿದ್ದಾನೆ.
ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಗಮನ ಸೆಳೆದಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸದಾನಂದ ಸೇರಿಗಾರ್​, ಸುಟ್ಟ ಕಾರಿನಲ್ಲಿ ತಾನೇ ಸತ್ತಿರುವುದಾಗಿ ಬಿಂಬಿಸಲು ಹೊರಟು ಬಂಧಿಯಾಗಿದ್ದ.

Previous articleಮಧ್ಯಮ ಹಂತದ ಪೊಲೀಸರಿಗೆ ವಿಶೇಷ ತರಬೇತಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Next articleಹಿಮಾಚಲ ನೂತನ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು