ಜೆಸ್ಕಾಂ ಇಇ ಮನೆ ಕಚೇರಿ ಮೇಲೆ ಲೋಕಾ ದಾಳಿ

0
29
IT-Raid

ಬಳ್ಳಾರಿ:ಅಕ್ರಮವಾಗಿ ಅಪಾರ ಪ್ರಮಾಣದ ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ಜೆಸ್ಕಾಂ ಇಇ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹುಸೇನಸಾಬ್ ಮನೆ ಹಾಗೂ ಕಚೇರಿಯಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಏಕಕಾಲಕ್ಕೆ ನಾಲ್ಕು ತಂಡಗಳಾಗಿ ಪರಿಶೀಲನೆ ಮಾಡುತ್ತಿರುವ ಲೋಕಾಯುಕ್ತ ಸಿಬ್ಬಂದಿ.
ಎಕ್ಸಿಕ್ಯೂಟಿವ್ ಇಂಜಿನೆಯರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಬಳ್ಳಾರಿ ಮತ್ತು ಹೊಸಪೇಟೆಯ ನಿವಾಸ ಸೇರಿ ಒಟ್ಟು ಆರು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಬಳ್ಳಾರಿಯ ರಾಘವೇಂದ್ರ ಕಾಲೋನಿಯ ಮನೆ, ಹೊಸಪೇಟೆ ಮನೆ ಮತ್ತು ಇತರೆ ಆರು ಕಡೆಗಳಲ್ಲಿ ಅಕ್ರಮ ಆಸ್ತಿ‌ ಮಾಡಿದ್ದಾರೆ ಎಂಬ ಆರೋಪ ಇದೆ.
ಬಳ್ಳಾರಿ, ಕೊಪ್ಪಳ ಸೇರಿದಂತೆ ಇತರೆ ಜಿಲ್ಲೆಯ ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿಮಾಡಿದ್ದಾರೆ.

Previous articleಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆ ಮೇಲೆ ಲೋಕಾಯುಕ್ತ ದಾಳಿ
Next articleಏ.25 ಮತ್ತು 26 ರಂದು ವಿಶೇಷ ಮಹಾ ಅಭಿಯಾನ