ಜಿ-೨೦ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆ

0
13

ಬಳ್ಳಾರಿ: ಭಾರತದ ಜಿ-೨೦ ಅಧ್ಯಕ್ಷತೆಯಲ್ಲಿ ಮೂರನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆ ಕರ್ನಾಟಕದ ಹಂಪಿಯಲ್ಲಿ ಇಂದು ಸಮಾಪನಗೊಂಡಿತು. ಭಾರತದ ಜಿ-೨೦ ಅಧ್ಯಕ್ಷತೆಯಲ್ಲಿ ೩ನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಮಾಲೋಚನೆಗಳು ಜುಲೈ ೧೧ರಂದು ಮುಕ್ತಾಯಗೊಂಡವು. ೩ನೇ ಸಿಡಬ್ಲ್ಯೂಜಿ ಗೋಷ್ಠಿಯು ವಾರಣಾಸಿಯಲ್ಲಿ ೨೦೨೩ರ ಆಗಸ್ಟ್ ೨೬ರಂದು ನಡೆಯಲಿರುವ ಮುಂಬರುವ ಜಿ-೨೦ ಸಂಸ್ಕೃತಿ ಸಭೆಯ ತಾಜಾ ಮಾಹಿತಿ ಹಾಗೂ ಬೆಳವಣಿಗೆಗಳೊಂದಿಗೆ ೩ನೇ ಸಿಡಬ್ಲೂಜಿಯ ಅಂತಿಮ ಗೋಷ್ಠಿ ಮುಕ್ತಾಯವಾಯಿತು.
ಭಾರತದ ಜಿ-೨೦ ಅಧ್ಯಕ್ಷತೆಯ ಅಡಿಯಲ್ಲಿ, ಸಿಡಬ್ಲ್ಯೂಜಿಯು ನೀತಿ ರಚನೆಯಲ್ಲಿ ಸಂಸ್ಕೃತಿಯನ್ನು ಕೇಂದ್ರ ಬಿಂದುವನ್ನಾಗಿರಿಸಲು ಶ್ರಮಿಸುತ್ತದೆ. ಕ್ರಮವಾಗಿ ಖಜುರಾಹೊ ಮತ್ತು ಭುವನೇಶ್ವರದಲ್ಲಿ ಆಯೋಜಿಸಲಾದ ಹಿಂದಿನ ಎರಡು ಸಿಡಬ್ಲ್ಯೂಜಿ ಸಭೆಗಳಲ್ಲಿ ಚರ್ಚಿಸಲಾದ ಶಿಫಾರಸುಗಳ ಮೇಲೆ ಒಮ್ಮತವನ್ನು ಸಾಧಿಸುವತ್ತ ೩ನೇ ಸಿಡಬ್ಲ್ಯೂಜಿ ಗಮನಹರಿಸಿತು.
ಇಂದು ಕರ್ನಾಟಕದ ಹಂಪಿಯ ಹಜಾರ ರಾಮ ದೇವಸ್ಥಾನದಲ್ಲಿ ಜಿ-೨೦ ಪ್ರತಿನಿಧಿಗಳು ಯೋಗ ಅಧಿವೇಶನದಲ್ಲಿ ಪಾಲ್ಗೊಂಡರು.

Previous articleನೂರಕ್ಕೆ ನೂರು ನಾನೇ ವಿಪಕ್ಷ ನಾಯಕ
Next articleರೈಲಿನಿಂದ ಕೆಳಕ್ಕೆ ಬೀಳಿಸಿಕೊಂಡ ಸೂಟ್ ಕೇಸ್ ಪತ್ತೆ ವಾರಸುದಾರರಿಗೆ ಹಸ್ತಾಂತರ