Home Advertisement
Home ತಾಜಾ ಸುದ್ದಿ ಜಿಲ್ಲೆ ತಾಲೂಕುಗಳನ್ನು ಪಟಪಟನೆ ಹೇಳುವ ಖುಷಿ

ಜಿಲ್ಲೆ ತಾಲೂಕುಗಳನ್ನು ಪಟಪಟನೆ ಹೇಳುವ ಖುಷಿ

0
140

ಇಳಕಲ್ : ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಮತ್ತು ಆಯಾ ಜಿಲ್ಲೆಗಳ ತಾಲೂಕು ಕೇಂದ್ರಗಳನ್ನು ಪಟಪಟನೆ ಹೇಳುವ ಖುಷಿ ಸುರೇಶ ಮಾದಂ ಕೇಳುಗರನ್ನು ಆಶ್ಚರ್ಯದಲ್ಲಿ ಮುಳುಗುವಂತೆ ಮಾಡುತ್ತಾಳೆ.
ಇಲ್ಲಿನ ಗುರುಲಿಂಗಪ್ಪ ಕಾಲೋನಿ ಸದ್ಯ ಇದಕ್ಕೆ ಯುನಿವರ್ಸಿಟಿ ಎಂದು ಕರೆಯಲಾಗುವ ಸರಕಾರಿ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ಈ ಬಾಲೆ ಖುಷಿ ಅರಳು ಹುರಿದಂತೆ ಜಿಲ್ಲೆಯ ಹೆಸರು ಕೇಳುತ್ತಲೇ ತಾಲೂಕಿನ ಕೇಂದ್ರಗಳ ಹೆಸರನ್ನು ಪಟಪಟನೇ ಹೇಳಿ ಕೇಳುಗರನ್ನು ತಬ್ಬಿಬ್ಬುಗೊಳಿಸುತ್ತಾರೆ.
ಸಾಮಾನ್ಯ ಜನರಿಗೆ ಯಾವ ಜಿಲ್ಲೆ ಯಾವ ತಾಲೂಕು ಎಂದು ಕೇಳಿದಾಗ ನಿರುತ್ತರರಾಗಿ ನಿಲ್ಲುವ ಸಮಯದಲ್ಲಿ ಎಲ್ಲಾ ಕೇಂದ್ರಗಳ ಹೆಸರನ್ನು ಕೇವಲ ೫ ನಿಮಿಷಗಳ ಅವಧಿಯಲ್ಲಿ ಹೇಳುವ ಖುಷಿ ಕೇಳುಗರನ್ನು ಅಷ್ಟೇ ಖುಷಿ ಪಡಿಸುತ್ತಾಳೆ. ನಗರದ ಯೋಗಗುರು ಶಿಕ್ಷಕ ಸಂಗಮೇಶ ಬಂಡರಗಲ್ಲ ಅವರ ಮಾರ್ಗದರ್ಶನದಲ್ಲಿ ಬಾಲಕಿ ಖುಷಿ ಉನ್ನತ ಮಟ್ಟಕ್ಕೆ ಏರುವ ಎಲ್ಲಾ ಲಕ್ಷಣಗಳನ್ನು ಪಡೆದುಕೊಂಡಿದ್ದಾಳೆ.

Previous articleಹಿರಿಯ ಪತ್ರಕರ್ತ, ಚಿಂತಕ ವಿ ಟಿ ರಾಜಶೇಖರ್ ನಿಧನ
Next articleವಿಕ್ರಂ ಗೌಡ ಹತ್ಯೆ: ನಕ್ಸಲ್ ಚಟುವಟಿಕೆ ನಿಗ್ರಹಿಸಲು ಎನ್ಕೌಂಟರ್