Home Advertisement
Home ಅಪರಾಧ ಜಿಲ್ಲಾಸ್ಪತ್ರೆ ಮೇಲ್ಛಾವಣಿ ಕುಸಿತ: ಮೂವರಿಗೆ ಗಾಯ

ಜಿಲ್ಲಾಸ್ಪತ್ರೆ ಮೇಲ್ಛಾವಣಿ ಕುಸಿತ: ಮೂವರಿಗೆ ಗಾಯ

0
100

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆ ಮೇಲ್ಛಾವಣಿ ಕುಸಿದು ಎರಡು ವರ್ಷದ ಮಗು ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆ ಹಿಂಭಾಗದ ತುರ್ತು ಚಿಕಿತ್ಸಾ ವಿಭಾಗದ ಮುಂಭಾಗದ ಮುಖ್ಯ ಕಟ್ಟಡದ ಮೇಲ್ಛಾವಣಿಯ ಕಾಂಕ್ರೀಟ್ ಪದರು ಕಳಚಿ ಬಿದ್ದಿದ್ದು, ಪ್ರೇಮಕ್ಕ(46), ಕಾವೇರಿ (36) ಮತ್ತು ನೇತ್ರಾ (02) ಗಾಯಗೊಂಡಿದ್ದಾರೆ. ಮಗುವಿನ ತಲೆ, ಇಬ್ಬರು ಮಹಿಳೆಯರ ಕೈ ಹಾಗೂ ಇನ್ನೊಬ್ಬರ ಬೆನ್ನಿಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪ್ರೇಮಕ್ಕ ಹಾಗೂ ಕಾವೇರಿ ಸಹೋದರಿಯರು ತಮ್ಮ ತಾಯಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಆರೋಗ್ಯ ವಿಚಾರಿಸಲು ಬಂದಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಇನ್ನು ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Previous articleಪ್ರಯಾಣಿಕರ ಗಮನಕ್ಕೆ… ೧೧೬ ಪ್ಯಾಸೆಂಜರ್ ರೈಲುಗಳಿಗೆ ಮರುಸಂಖ್ಯೆ
Next articleಮಂಗಳೂರಿಗೆ ಮಾದಕ ವಸ್ತು ಕೋಕೆನ್ ಪೂರೈಕೆ ಮಾಡುತ್ತಿದ್ದ ನೈಜೇರಿಯಾ ಪ್ರಜೆಯ ಸೆರೆ