ಜಾಲಹಳ್ಳಿ ನಮ್ಮ ಮೆಟ್ರೋ ಪುನರಾರಂಭ

0
30

ಬೆಂಗಳೂರು: ನಗರದ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ನಂತರ ರೈಲು ಸೇವೆಗಳು ಬೆಳಗ್ಗೆ10:50ಕ್ಕೆ ಪುನರಾರಂಭ ಆಗಿರುವುದಾಗಿ ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಬೆಳಗ್ಗೆ ಸುಮಾರು 10.25 ಗಂಟೆಗೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಆಗಮಿಸುತ್ತಿದ್ದ ವೇಳೆ ಸುಮಾರು 49 ವರ್ಷದ ಬಿಹಾರ ಮೂಲದ ಮಾಜಿ ವಾಯುಪಡೆಯ ಶ್ರೀ. ಅನಿಲ್ ಕುಮಾರ್ ಪಾಂಡೆ ಎಂಬ ವ್ಯಕ್ತಿ ಟ್ರ್ಯಾಕ್ ಮೇಲೆ ಹಾರಿದ್ದಾರೆ. ಘಟನೆಯ ನಂತರ ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಂ ETS ಅನ್ನು #BMRCL ಸಿಬ್ಬಂದಿ ಮತ್ತು ತಂಡವು ನಿರ್ವಹಿಸಿ ಅವರನ್ನು ರಕ್ಷಿಸಲಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ ಯಾವುದೇ ಗಾಯಗಳು ವರದಿಯಾಗಿಲ್ಲ.
ಘಟನೆ ಬಆಕ ಹಸಿರು ಮಾರ್ಗದಲ್ಲಿ ರೈಲು ಸೇವೆಗಳನ್ನು 10.50 ಗಂಟೆಯ ಬಆಕ ಪುನರಾರಂಭಿಸಲಾಯಿತು.ಈ ಅವಧಿಯಲ್ಲಿ 10.25 ಗಂಟೆಯಿಂದ 10.50 ಗಂಟೆಯವರೆಗೆ 4 ರೈಲುಗಳನ್ನು ಮಾದಾವರ ಮೆಟ್ರೊ ನಿಲ್ದಾಣದವರೆಗೆ ಬದಲಾಗಿ ಯಶವಂತಪುರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವೆ ಶಾರ್ಟ್ ಲೂಪ್‌ನಲ್ಲಿ ನಡೆಸಲಾಯಿತು. ಎಂದಿದ್ದಾರೆ.

Previous articleಅಮಿತ್‌ ಶಾ ಕುರಿತ ಹೇಳಿಕೆ : ರಾಹುಲ್ ವಿರುದ್ಧದ ವಿಚಾರಣೆಗೆ ತಡೆ
Next articleಅನುದಾನದಲ್ಲಿ ಬಿಡಿಗಾಸು ಕೂಡ ಬಿಡುಗಡೆ ಆಗಿಲ್ಲ