ಜಾತಿ ಗಣತಿ ವರದಿ ಬಿಡುಗಡೆ ಮಾಡ್ತೇವೆ

0
49

ಹರಿಹರ: ಜಾತಿ ಗಣತಿಯ ವರದಿ ಸಿದ್ಧಗೊಂಡಿದ್ದು, ಈ ವರದಿ ವಿರುದ್ಧ ಹಲವಾರು ಟೀಕೆ-ಟಿಪ್ಪಣಿಗಳು ಬರುತ್ತಿವೆ. ಅದನ್ನು ಬಿಡುಗಡೆಗೊಳಿಸಲು ತಡೆ ಒಡುತ್ತಿದ್ದಾರೆ. ಏನೇ ಆಗಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡು ತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ರಾಜನಹಳ್ಳಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಕೆಳ ಸಮುದಾಯಗಳ ಸರ್ವತೋಮುಖ ಕಲ್ಯಾಣ, ಮೀಸಲಾತಿಗಾಗಿ ಆಗ್ರಹಿಸಿ ಪ್ರಸನ್ನಾನಂದ ಶ್ರೀಗಳು, ಮಠದಿಂದ ೧೫ ದಿನಗಳ ಕಾಲ ಸುಮಾರು ೪೦೦ ಕಿ.ಮೀ. ದೂರದ ಬೆಂಗಳೂರಿನವರೆಗೆ ಪಾದಯಾತ್ರೆ ಮೂಲಕ ತೆರಳಿ ಫ್ರೀಡಂ ಪಾರ್ಕಿನಲ್ಲಿ ೨೫೭ ದಿನ ಅನ್ನ-ಆಹಾರವಿಲ್ಲದೆ ಸರ್ಕಾರದ ವಿರುದ್ಧ ಮೌನ ಧರಣಿ ನಡೆಸಿದರು.
ಶ್ರೀಗಳು ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಸಮ್ಮಿಶ್ರ ಸರ್ಕಾರ ವಿತ್ತು. ಆಗ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದರು. ನಾನು ಡಿಸಿಎಂ ಆಗಿದ್ದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ಶ್ರೀಗಳಿಂದ ಮನವಿ ಸ್ವೀಕರಿಸಲಿಲ್ಲ. ಆದರೆ ಸಮಾಜದ ೧೫ ಜನ ಶಾಸಕರೊಂದಿಗೆ ಸ್ಥಳಕ್ಕೆ ತೆರಳಿ ಶ್ರೀಗಳ ಮನವಿ ಸ್ವೀಕ ರಿಸಿ ಅಂದು ಶ್ರೀಗಳಿಗೆ ಭರವಸೆ ನೀಡಿದಂತೆ ಇಂದು ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ಆ ಕೆಲಸ ನಮ್ಮಿಂದ ಆಗಿದೆ ಎಂದರು.

Previous articleಮೆಟ್ರೋ ರೈಲು ಪ್ರಯಾಣ ದರ ಏರಿಕೆ: ಎಚ್‌ಡಿಕೆ ಆಕ್ರೋಶ
Next articleರಿಮ್ಸ್ ಮೆಡಿಕಲ್ ವಿದ್ಯಾರ್ಥಿನಿ ಕಾಣೆ: ಮರುದಿನ ಸಂಪರ್ಕಕ್ಕೆ