ಇಳಕಲ್: ರಾಜ್ಯ ಸರಕಾರ ಜಾರಿಗೆ ತರಲು ಹೊರಟಿರುವ ಜಾತಿ ಗಣತಿಯಲ್ಲಿ ನೇಕಾರರಿಗೆ ದೊಡ್ಡ ಅನ್ಯಾಯವಾಗಿದೆ ಎಂದು ನೇಕಾರ ಸಮುದಾಯ ಒಕ್ಕೂಟದ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.
ಮಂಗಳವಾರದಂದು ಇಲ್ಲಿನ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ಗುರಂ ಸರಕಾರ ನೇಕಾರ ಬಾಂಧವರಿಗೆ ಅನ್ಯಾಯ ಮಾಡಿದ್ದು ಅದನ್ನು ಸರಿಪಡಿಸುವ ಕಾರ್ಯ ನಡೆಯಬೇಕು ಇಲ್ಲದಿದ್ದರೆ ಆ ವರದಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಇಳಕಲ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಸತೀಶ ಸಪ್ಪರದ ಮಾತನಾಡಿ ರಾಜ್ಯದಲ್ಲಿ ಲಕ್ಷಾಂತರ ನೇಕಾರ ಕುಟುಂಬಗಳು ಇದ್ದು ಅವರೆಲ್ಲರ ಹಿತಾಸಕ್ತಿಗಳನ್ನು ಈ ವರದಿ ಕಾಪಾಡುವದಿಲ್ಲ ಸರಕಾರ ಈ ಬಗ್ಗೆ ಪುನರ್ ವಿಮರ್ಶೆ ಮಾಡುವ ಅಗತ್ಯ ಇದೆ ಎಂದು ಹೇಳಿದರು. ಪಂಪಣ್ಣ ಕಾಳಗಿ, ಮಹಾಂತೇಶ ಕಂಪ್ಲಿ, ಅಶೋಕ ಶ್ಯಾವಿ ಜಿ ಎಚ್ ಗುಳೇದ, ವಿಠ್ಠಲ ಅರಳಿಕಟ್ಟಿ, ಶಂಕರ ಬೋರಗಿ, ದಶರಥ ಮನ್ನಾಪೂರ, ಏಕನಾಥ ರಾಜೊಳ್ಳಿ ಮತ್ತಿತರರು ಉಪಸ್ಥಿತರಿದ್ದರು