ಜನಸಂಕಲ್ಪ ಯಾತ್ರೆಗೆ ಇನ್ನಷ್ಟು ವೇಗ – ಸಿಎಂ ಬೊಮ್ಮಾಯಿ

0
14
CM

ಹುಬ್ಬಳ್ಳಿ: ಜನಸಂಕಲ್ಪ ಯಾತ್ರೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ತಿಂಗಳಿಂದ ಯಾತ್ರೆಗೆ ಇನ್ನಷ್ಟು ವೇಗ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ವರ್ಷವಾಗಿರುವುದರಿಂದ ಸಹಜವಾಗಿ ಅಭಿವೃದ್ಧಿ ಚಟುವಟಿಕೆಗೆ ತೀವ್ರಗೊಳಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಈಗಾಗಲೇ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಜನಸಂಕಲ್ಪ ಯಾತ್ರೆ ಮಾಡಲಾಗಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಪಿಎಫ್ಐ ಸಂಘಟನೆಯು ಜ್ವಾಯಿಂಟ್ ಪಿಎಫ್ಐ ಎಂದು ಗೋಡೆ ಬರಹ ಕಂಡು ಬಂದಿವೆಯಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಾರೆ ಎಂದರು.

Previous articleಸಿದ್ದರಾಮಯ್ಯ ಅವರಿಗೆ ಕಲಘಟಗಿ ಕ್ಷೇತ್ರ ಬಿಟ್ಟು ಕೊಡಲು ಸಿದ್ಧ: ಸಂತೋಷ ಲಾಡ್
Next articleನಾನು ಸಂವಿಧಾನದ ಪರ – ಶಾಸಕ ಬಯ್ಯಾಪುರ