ಚೋರ್ಲಾ ಘಾಟ್‌ನಲ್ಲಿ ಅಪಘಾತ: ಇಬ್ಬರ ಸಾವು

0
12
accident

ಬೆಳಗಾವಿ: ಚೋರ್ಲಾ ಘಾಟ್ ಬಳಿ ಶುಕ್ರವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಕಾರು ಅಫಘಾತಕ್ಕೆ ಒಳಗಾಗಿದ್ದು ಸುಧೀರ ಕುಮಾರ ಹಾಗೂ ಚಾಲಕ ನೂರ್ ಶೇಖ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಮಿತ ವೇಗದಲ್ಲಿ ಬಂದ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

Previous articleಸಾಲಕ್ಕೆ ಹೆದರಿ ರೈತ ನೇಣಿಗೆ ಶರಣು
Next articleಮುರುಘಾಶ್ರೀ ಸುಳ್ಳು ಕೇಸಿನಲ್ಲಿ ಮತ್ತೊಬ್ಬ ಬಂಧನ