ಚೆಕ್‍ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

0
24
ಬಾಗಲಕೋಟೆ

ಬಾಗಲಕೋಟೆ:‌ ಬಾಗಲಕೋಟೆ ಮತ್ತು ಬಾದಾಮಿ ಮತಕ್ಷೇತ್ರಗಳಲ್ಲಿ ಸ್ಥಾಪಿಸಲಾದ ವಿವಿಧ ಚೆಕ್‍ಪೋಸ್ಟಗಳಿಗೆ ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಪಿ. ಸುನೀಲ್‍ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವನಗರದ ಎಪಿಎಂಸಿ ಚೆಕ್‍ಪೋಸ್ಟ್‌, ಗದ್ದನಕೇರಿ ಕ್ರಾಸ್ ಚೆಕ್‍ಪೋಸ್ಟ್‌, ಕುಳಗೇರಿ ಕ್ರಾಸ್‍ನಲ್ಲಿ ಸ್ಥಾಪಿಸಲಾದ ಚೆಕ್‍ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಚೆಕ್‍ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯವೈಖರಿ, ತಪಾಸಣೆ ಮಾಡಲಾದ ವಾಹನಗಳ ಮಾಹಿತಿಗಳನ್ನೊಳಗೊಂಡ ಮಾಹಿತಿಯನ್ನು ಪಡೆದುಕೊಂಡರು. ಭೇಟಿ ವೇಳೆಯಲ್ಲಿ ಯುಕೆಪಿ ಮಹಾವ್ಯವಸ್ಥಾಪಕ ಭಂವರ ಸಿಂಗ್ ಮೀನಾ, ಜಿಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಪ್ರೊಬೇಷನರಿ ಐಎಎಸ್ ಅಧಿಕಾರಿ ಕನಿಷ್ಕ ಸೇರಿದಂತೆ ಇತರರಿದ್ದರು.

Previous articleಬಿಜೆಪಿ ಸೇರಿದ ಮಾಜಿ ಶಾಸಕ ಎ.ಟಿ ರಾಮಸ್ವಾಮಿ
Next articleಕಳ್ಳ‌ಬಟ್ಟಿ ಸಾರಾಯಿ ಮಾರಾಟ: ಓರ್ವನ ಬಂಧನ