Home Advertisement
Home ತಾಜಾ ಸುದ್ದಿ ಚುನಾವಣಾ ಬಾಂಡ್, ಕೋರ್ಟ್ ತೀರ್ಪು ಹಿನ್ನಡೆಯಲ್ಲ

ಚುನಾವಣಾ ಬಾಂಡ್, ಕೋರ್ಟ್ ತೀರ್ಪು ಹಿನ್ನಡೆಯಲ್ಲ

0
125

ಹುಬ್ಬಳ್ಳಿ: ಚುನಾವಣಾ ಬಾಂಡ್‌ಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕೇಂದ್ರ ಸರ್ಕಾರಕ್ಕೆ ಹಿನ್ನಡೆ ಅಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ತೀರ್ಪು ನೀಡಿದೆ. ಅದರಿಂದ ಕೇಂದ್ರ ಸರ್ಕಾರಕ್ಕೆ ಹಿನ್ನಡೆ ಎಂದು ಭಾವಿಸುವುದು ತಪ್ಪು. ತೀರ್ಪಿನ ಮೂಲಕ ಏನು ಸುಧಾರಣೆಗೆ ಸಲಹೆ ನೀಡಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಸದ್ಯಕ್ಕೆ ನನಗೆ ತೀರ್ಪಿನ ಪೂರ್ಣ ಮಾಹಿತಿ ಇಲ್ಲ. ತೀರ್ಪಿನ ಕುರಿತು ವಿವರವಾದ ಅಧ್ಯಯನ ಮಾಡಬೇಕಾಗುತ್ತದೆ. ಕಾನೂನು ಸಚಿವರು ಈ ಕುರಿತು ಉತ್ತರಿಸಲಿದ್ದಾರೆ ಎಂದು ಹೇಳಿದರು.

Previous articleಲೋಕಾ ಬಲೆಗೆ ಮುಖ್ಯಶಿಕ್ಷಕ
Next articleಚುನಾವಣಾ ಬಾಂಡ್ ರದ್ದು