ಚಿರತೆ ಸೆರೆ: ಗ್ರಾಮಸ್ಥರ ನಿಟ್ಟುಸಿರು

0
26

ವಿಜಯಪುರ(ಧೂಳಖೇಡ): ಜಿಲ್ಲೆಯ ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದಲ್ಲಿ ಪ್ರತ್ಯಕ್ಷವಾದ ಚಿರತೆಯನ್ನು ಗ್ರಾಮಸ್ಥರ ನೆರವಿನೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಸೆರೆ ಹಿಡಿದಿದ್ದಾರೆ.
ಈ ವೇಳೆ ಚಿರತೆ ದಾಳಿ ಮಾಡಿದ್ದರಿಂದ ನಾಲ್ವರಿಗೆ ಗಾಯಗಳಾಗಿವೆ. ಚಿರತೆ ದಾಳಿಯಿಂದ ಗಾಯಗೊಂಡ ಸಂತೋಷ ತಾಂಬೆ, ಈರಣ್ಣಾ ಮೇತ್ರಿ ಗೋಟ್ಯಾಳ, ಮಹಾದೇವ ಯಾದವಾಡ ಮಣಂಕಲಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮಸ್ಥನೊಬ್ಬ ಜೋಳದ ಹೊಲದಲ್ಲಿ ಪಕ್ಷಿಗಳನ್ನು ಓಡಿಸಲು ಹೋದಾಗ ಏಕಾಏಕಿ ಚಿರತೆ ದಾಳಿ ಮಾಡಿದೆ. ಆತನ ಕೂಗಾಟ ಗಮನಿಸಿ ಅಕ್ಕಪಕ್ಕದ ತೋಟದ ವಸ್ತಿಯ ಜನ ಧಾವಿಸಿ ಬೆದರಿಸಿದ್ದಾರೆ. ಓಡಿದ ಚಿರತೆ ಜೋಳದ ಹೊಲ ಸೇರಿಕೊಂಡಿದೆ. ತಕ್ಷಣವೇ ಗ್ರಾಮಸ್ಥರು ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇಡೀ ಗ್ರಾಮಸ್ಥರು ಸೇರಿ ಬಲೆಗಳನ್ನು ತಂದು ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ಕೈಗೊಂಡರು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನೇತೃತ್ವ ವಹಿಸಿದರು. ಸಮಾರು ಐದು ಗಂಟೆಗೂ ಅಧಿಕ ಕಾಲ ನಡೆದ ಕಾರ್ಯಾಚರಣೆಯಲ್ಲಿ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.

Previous articleಸ್ವಾಮೀಜಿ ಆಶೀರ್ವಾದ ಪಡೆದ ಪೊಲೀಸರಿಗೆ ವರ್ಗಾವಣೆ ಭಾಗ್ಯ
Next articleಸ್ನೇಹಿತನಿಂದಲೇ ಯುವತಿ ಕೊಲೆ: ಪ್ರಮುಖ ಆರೋಪಿ ಬಂಧನ