ಹುಬ್ಬಳ್ಳಿ: ಚಲಿಸುತ್ತಿದ್ದ ಚಿಗರಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಸಂಜೆ ನಡೆದಿದ್ದು, ಯಾವುದೇ ಅಪಾಯವಾಗಿಲ್ಲ.
ಧಾರವಾಡ ದಿಂದ ಹುಬ್ಬಳ್ಳಿಗೆ ಬಂದ ಚಿಗರಿ ಬಸ್ ಚಕ್ರಕ್ಕೆ ಮಹಾನಗರ ಪಾಲಿಕೆಯ ಮುಂಭಾಗದಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ, ಇದನ್ನು ನೋಡಿದ ಬೇರೆ ವಾಹನದಲ್ಲಿದ್ದ ಪ್ರಯಾಣಿಕರು ಚಿಗರಿ ಬಸ್ ನ ಚಾಲಕನಿಗೆ ತಿಳಿಸಿದ್ಕೂದು, ಚಾಲಕ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಚಿಗರಿ ಬಸ್ ಗೆ ಹತ್ತಿದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಗರಿ ಬಸ್ ಒಂದಿಲ್ಲೊಂದು ಅವಘಡದಿಂದ ಸುದ್ದಿಯಲ್ಲಿದ್ದು ಅವಾಂತರಕ್ಕೆ ಕಾರಣವಾಗಿದೆ.