ಚಾಲಕನಿಗೆ ಹೃದಯಾಘಾತ: ಸರಣಿ ಅಪಘಾತದಲ್ಲಿ ಓರ್ವ ಸಾವು

0
111

ಕಲಬುರಗಿ: ಚಲಿಸುತ್ತಿದ್ದ ಕಂಟೆನರ್ ಲಾರಿ ಡ್ರೈವರ್‌ಗೆ ಹೃದಯಾಘಾತವಾಗಿ ಸರಣಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.
ಘಟನೆಯಲ್ಲಿ ‌ತರಕಾರಿ ವ್ಯಾಪಾರಿ ಮಹಮದ್ ಅಲಿ(32) ಸ್ಥಳದಲ್ಲೇ ಮೃತಪಟ್ಟವನೆಂದು ಗುರುತಿಸಲಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಿಂದ ಕಲಬುರಗಿ ಕಡೆಗೆ ಕಂಟೆನರ್ ಹೋಗುತ್ತಿತ್ತು. ಜೇವರ್ಗಿ ಬಸ್ ನಿಲ್ದಾಣ ಬಳಿ ಹೃದಯಾಘಾತ ಆದ ಹಿನ್ನಲೆ ಸ್ಥಳದಲ್ಲಿದ್ದ ಆಟೋ ಮತ್ತು ಬೈಕ್‌ಗಳಿಗೆ ಹಾಗೂ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದು ಬಳಿಕ ನಿಂತಿದೆ.
ಘಟನೆಯಲ್ಲಿ ಸುಮಾರು ಐದು ಜನರಿಗೆ ಗಾಯಗಳಾಗಿದ್ದು, ಜೇವರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗುತ್ತಿದೆ. ಹೃದಯಾಘಾತಕ್ಕೆ ಒಳಗಾದ ಚಾಲಕನನ್ನು ಕೂಡ ಕೂಡಲೇ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous article22ರಂದು ನೃತ್ಯಕಥಾ ನೃತ್ಯೋತ್ಸವ
Next articleಸರ್ಕಾರ ದಿವಾಳಿ, ಗುತ್ತಿಗೆದಾರರಿಗೆ ಕೊಡಲೂ ಹಣ ಇಲ್ಲ