ಇಳಕಲ್ : ತಾಲೂಕಿನ ಕರಡಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಗ್ರಾಮಪಂಚಾಯಿತಿಯಿಂದ ನಿರ್ಮಾಣವಾಗಿರುವ ಮಹಿಳೆಯರ ಸಾರ್ವಜನಿಕ ಶೌಚಾಲಯ ಕಟ್ಟಡವನ್ನು ಗ್ರಾಮದ ಗ್ರಾಮ ಪಂಚಾಯತ ಸದಸ್ಯೆ ಶಶಿಕಲಾ ಎಂಬುವರ ಗಂಡ ಮಲ್ಲನಗೌಡ ಗೌಡರ ಏಕಾಏಕಿ ಜೆಸಿಬಿ ಬಳಸಿ ಕೆಡವಿದ್ದಾನೆ.
ಗ್ರಾಮದ ಮಹಿಳೆಯರು ಆಕ್ರೋಶಗೊಂಡು ಗ್ರಾಮ ಪಂಚಾಯಿತಿಗೆ ತೆರಳಿ ಅಲ್ಲಿರುವ ಪಿಡಿಓ ಮುದಗಲ್ಲ ಹಾಗೂ ಅಧ್ಯಕ್ಷ ಮಹಾಂತೇಶ ಬೋಪುರದ ಮುಂದೆ ಗಲಾಟೆ ಪ್ರಾರಂಭಿಸಿದರು. ಮಹಿಳೆಯರು ಶೌಚಕ್ಕೆ ಹೋಗಬೇಕಾದರೆ ಏನು ಮಾಡಬೇಕು ನಮಗಿದ್ದ ಒಂದೇ ಒಂದು ಆಸರೆಯನ್ನು ಸಹ ಕೆಡವಿಹಾಕಿ ಅನ್ಯಾಯಮಾಡಿದ್ದಾರೆ ಎಂದು ಗೋಗರೆದರು.
ನಂತರ ಅದ್ಯಕ್ಷರು ಮತ್ತು ಪಿಡಿಓರವರು ಅವರಿಗೆ ಅತಿ ಶೀಘ್ರದಲ್ಲಿ ಶೌಚಾಲಯ ನಿರ್ಮಿಸಿ ಕೊಡುವದಾಗಿ ಭರವಸೆ ನೀಡಿ ಮಹಿಳೆಯರಿಗೆ ಸಮಾದಾನ ಪಡಿಸಿದರು. ಕೇವಲ ಶೌಚಾಲಯ ನಿರ್ಮಾಣ ಮಾಡುವದಲ್ಲ , ಸರಕಾರದ ಆಸ್ತಿಯನ್ನು ಕೆಡವಿದ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.