ಗ್ಯಾರೆಂಟಿ ಯೋಜನೆಗಳಿಗೆ ತಿಲಾಂಜಲಿ ಇಡಲು ಪೀಠಿಕೆಯೇ?

0
12
ಸಾಂದರ್ಭಿಕ ಚಿತ್ರ

ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಮತ ಪಡೆಯುವ, ಅಧಿಕಾರ ಹಿಡಿಯುವ ದೃಷ್ಟಿಯಿಂದ ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ರೂಪಿಸಿರುವ ಗಿಮಿಕ್ ಮಾತ್ರವೇ ಹೊರತು ಕಾಂಗ್ರೆಸ್ ಪಕ್ಷಕ್ಕೆ ಬಡವರ ಕಲ್ಯಾಣದ ಬಗ್ಗೆ ಯಾವುದೇ ನಿಜವಾದ ಕಾಳಜಿ ಇಲ್ಲ ಎಂದು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್ ಪಕ್ಷದ ಪರವಾಗಿಲ್ಲ, ಕಾಂಗ್ರೆಸ್ ಗೆ ಮತ ನೀಡಲಿಲ್ಲ, ಪಕ್ಕದ ಆಂಧ್ರಪ್ರದೇಶದಲ್ಲಿ ಇದೇ ರೀತಿ ಯೋಜನೆಗಳು ಅಲ್ಲಿನ ಸರ್ಕಾರದ ಕೈಹಿಡಿಯಲಿಲ್ಲ – ಹೀಗೆ ಕೇವಲ ಚುನಾವಣಾ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನ ವಿಶ್ಲೇಷಣೆ ಮಾಡಿ ಹೈಕಮಾಂಡ್‌ಗೆ ವರದಿ ನೀಡಿರುವುದು ಕರ್ನಾಟಕ ಕಾಂಗ್ರೆಸ್‌ ಪಕ್ಷದ ಮುಖವಾಡ ಬಯಲು ಮಾಡಿದೆ. ಸಿಎಂ ಸಿದ್ದರಾಮಯ್ಯನವರೇ, ಗ್ಯಾರೆಂಟಿ ಯೋಜನೆಗಳು ನಮ್ಮ ಬದ್ಧತೆ ಎಂದು ಬೊಗಳೆ ಬಿಡುತ್ತೀರಲ್ಲ, ಸಚಿವರು ನೀಡಿರುವ ಈ ವರದಿ ಗ್ಯಾರೆಂಟಿ ಯೋಜನೆಗಳಿಗೆ ತಿಲಾಂಜಲಿ ಇಡಲು ಪೀಠಿಕೆಯೇ? ಎಂದು ಪ್ರಶ್ನಿಸಿದ್ದಾರೆ.

Previous articleಜಲಾಶಯ ಮೇಲೆ ಬಂದವು ಬೃಹತ್ ಕ್ರೇನ್, ಹೈಡ್ರೋ ಫಾಲ್ ಫಿಂಗರ್
Next articleದೇವರಾಜ ಅರಸು ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಕೆ ಕಾಂತ ಆಯ್ಕೆ