ಗೆಜೆಟೆಡ್ ಅಧಿಕಾರಿ ಸೇರಿ ಐವರ ವಿರುದ್ಧ ದೂರು ದಾಖಲು

0
28

ಬೆಳಗಾವಿ: ‘ನಕಲಿ ದಾಖಲೆ ಸೃಷ್ಟಿ ಸಂಬಂಧ ಗೆಜೆಟೆಡ್ ಅಧಿಕಾರಿ ಸೇರಿದಂತೆ 5 ಜನರ ವಿರುದ್ಧ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ತಾಲೂಕು ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡಿದ್ದ ಸಂಜಯ ಡುಮ್ಮಗೋಳ. ಗೀತಾ ಪಾಂಡುರಂಗ ಕಾಟಗಾಳಕಾರ, ಪ್ರಕಾಶ ಮಾರುತಿ ಬೆತ್ತಗಾವಡೆ, ಸವಿತಾ ಪಾಂಡುರಂಗ ಕಾಟಗಾಳಕರ ಮತ್ತು ಅಶೋಕ ದೇವಪ್ಪ ನಾಗರಾಳ ವಿರುದ್ಧ ದೂರು ದಾಖಲಾಗಿದೆ.
ಖಾನಾಪುರ ತಾಲೂಕಿನ ರುಮೇವಾಡಿಯ ವಿನೋದವೆಂಕಟ ನಾಯಿಕ ಎಂಬುವರು ಈ ದೂರು ನೀಡಿದ್ದಾರೆ, ಪೊಲೀಸರು ಬಿಎನ್ಎಸ್ ಕಾಯ್ದೆ 2023 ಸಹಕಲಂ 318(2), 336(2), 336(3), 340(2) ಪ್ರಕರಣ ದಾಖಲಾಗಿದೆ.
ಇದರಲ್ಲಿನ ಆರೋಪಿತರು ಫಿರ್ಯಾಧಿದಾರರ ಮತ್ತು ಸಾರ್ವಜನಿಕರ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸಮಾಜದಲ್ಲಿ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆಂದು ದೂರಲಾಗಿದೆ. ಅಷ್ಟೇ ಅಲ್ಲ ದೂರುದಾರರು ಆರೋಪಿತರ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.

Previous articleದ.ಕ. ಜಿಲ್ಲಾ ಬಂದ್‌ಗೆ ಕರೆ: ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲು
Next articleಶೀಘ್ರ 11 ಸಾವಿರ ಶಿಕ್ಷಕರ ನೇಮಕ