ಗೃಹಲಕ್ಷ್ಮೀ ಹೆಸರಲ್ಲಿ ಮಹಿಳೆಯರಿಂದ ಹಣ ವಸೂಲಿ

0
111

ಬಳ್ಳಾರಿ: ಗೃಹಲಕ್ಷ್ಮೀ ಯೋಜನೆ ಹೆಸರಿನಲ್ಲಿ ಮಹಿಳೆಯರಿಂದ ಹಣ ವಸೂಲಿ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ಮನೆ ಮನೆಗೆ ತಲುಪಿಸಲು ಅರ್ಜಿಗಳನ್ನ ಅಪಲೋಡ್ ಮಾಡುತ್ತಿದ್ದೇನೆ. ಎಲ್ಲರಿಗೂ ಸೈಬರ್ ಸೆಂಟರ್​ಗೆ ಬಂದು ಅರ್ಜಿ ಸಲ್ಲಿಸಲು ಆಗಲ್ಲ. ಹೀಗಾಗಿ ನಾನೇ ಮನೆ ಮನೆಗೆ ತೆರಳಿ ಅರ್ಜಿ ಅಪಲೋಡ್ ಮಾಡುತ್ತಿದ್ದೇನೆ ಎಂದು ಬೆಂಗಳೂರು ಮೂಲದ ನಬೀರ್ ಹುಸೇನ್ ಎಂಬಾತ ಬಳ್ಳಾರಿಯ ದೇವಿನಗರ, ಬಾಪೂಜಿನಗರ ಸೇರಿದಂತೆ ವಿವಿಧೆಡೆ ಮಹಿಳೆಯರಿಂದ 150 ರೂಪಾಯಿಂದ 200 ರೂಪಾಯಿ ವರೆಗೆ ಹಣ ವಸೂಲಿ ಮಾಡುತ್ತಿದ್ದ.
ಅನುಮಾನಗೊಂಡ ಸ್ಥಳೀಯರು ಆತನನ್ನು ಪ್ರಶ್ನಿಸಿದಾಗ ಅಸಲಿ ಕಥೆ ತಿಳಿದಿದೆ. ಕೂಡಲೇ ನೂರಾರು ಜನ ಸೇರಿ ಆತನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

Previous articleವಿಠ್ಠಲನಿಗೆ ಮಹಾ ಸಿಎಂ ಪೂಜೆ
Next articleಅಪಘಾತ: ಮಹಿಳೆ ಸಾವು