ಗುರುದ್ವಾರದಲ್ಲಿ ಸೇವೆ ಸಲ್ಲಿಸಿದ ಮೋದಿ

0
8

ನವದೆಹಲಿ: ಬಿಹಾರದ ರಾಜಧಾನಿ ಪಾಟ್ನಾದ ತಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಸಾಮೂಹಿಕ ಭೋಜನವನ್ನು ಬಡಿಸಿದ್ದಾರೆ.


ಊಟ ತಯಾರಿಕೆಯಲ್ಲಿ ಸಹಾಯ ಮಾಡಿದ್ದಾರೆ. ಕೇಸರಿ ಬಣ್ಣದ ಸಿಖ್ಖರ ಪೇಟ ಧರಿಸಿ ಮೋದಿ ಸಾಲಾಗಿ ಕುಳಿತಿದ್ದ ಭಕ್ತರಿಗೆ ಸ್ಟೀಲ್ ಬಕೆಟ್ ಹಿಡಿದುಕೊಂಡು ಊಟ ಬಡಿಸಿದ್ದಾರೆ. ಸಿಖ್ ಆರಾಧನಾ ಸ್ಥಳದಲ್ಲಿ ಪ್ರಧಾನಿ ಮೋದಿಯವರ ‘ಸೇವೆ’ಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Previous articleಸಂಸದ ಸೆಲ್ವರಾಜ್‌ ನಿಧನ
Next articleಶಾಲೆ ಕೊಠಡಿಯಲ್ಲೆ ಕೊಲೆ