ಹುಬ್ಬಳ್ಳಿ: ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಸಲ್ಲೇಖನ ವೃತ ಕೈಗೊಂಡಿರುವ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಅವರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ಮಾಡಿದರು.
ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥಂಕರ ಕ್ಷೇತ್ರಕ್ಕೆ ಆಗಮಸಿದ ಗೃಹ ಸಚಿವ, ಸ್ವಾಮೀಜಿಗಳನ್ನು ಭೇಟಿ ಮಾಡಿ ಭರವಸೆ ನೀಡಿದ್ದಾರೆ. ಜೈನ ಮಂದಿರದಲ್ಲಿ ಸ್ವಾಮೀಜಿಗಳ ಜೊತೆ ಕೆಲ ಹೊತ್ತು ಪ್ರಕರಣ ಕುರಿತು ಅವರು ಚರ್ಚೆ ನಡೆಸಿದರು, ಆರೋಪಿಗಳಿಗೆ ಸೂಕ್ತ ಕಾನೂನು ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ. ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಸ್ಥಳೀಯ ಪ್ರಮುಖರು.