Home Advertisement
Home ತಾಜಾ ಸುದ್ದಿ ಖ್ಯಾತ ಹಿಂದಿ ಬರಹಗಾರ ವಿನೋದ್ ಕುಮಾರ್ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ

ಖ್ಯಾತ ಹಿಂದಿ ಬರಹಗಾರ ವಿನೋದ್ ಕುಮಾರ್ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ

0
100

ನವದೆಹಲಿ: 59ನೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಸಿದ್ಧ ಹಿಂದಿ ಕವಿ ಮತ್ತು ಬರಹಗಾರ ವಿನೋದ್ ಕುಮಾರ್ ಶುಕ್ಲಾ ಅವರನ್ನು ಆಯ್ಕೆ ಮಾಡಲಾಗಿದೆ.
2024ನೇ ಸಾಲಿನ ಪ್ರಶಸ್ತಿ ಇದಾಗಿದ್ದು, ಭಾರತದ ಅತ್ಯುನ್ನತ ಸಾಹಿತ್ಯ ಗೌರವವನ್ನು ಪಡೆದ ಮೊದಲ ಲೇಖಕ ಎಂಬ ಹೆಗ್ಗಳಿಕೆಗೆ ಶುಕ್ಲಾ ಅವರು ಪಾತ್ರರಾಗಿದ್ದಾರೆ. ಅಲ್ಲದೇ ಛತ್ತೀಸ್‌ಗಢದಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಮತ್ತು ಈ ಪ್ರಶಸ್ತಿಯನ್ನು ಪಡೆದ 12ನೇ ಹಿಂದಿ ಸಾಹಿತಿಯಾಗಿದ್ದಾರೆ.
ಪ್ರಶಸ್ತಿಯು 11 ಲಕ್ಷ ರೂ. ನಗದು ಬಹುಮಾನ, ಕಂಚಿನ ಸರಸ್ವತಿ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

Previous articleಮಂತ್ರಾಲಯದ ಶ್ರೀರಾಯರ ಹುಂಡಿಯಲ್ಲಿ 3.48 ಕೋಟಿ ಕಾಣಿಕೆ ಸಂಗ್ರಹ
Next article ಐಪಿಎಲ್ ಸಿಜನ್ ೧೮:  RCB ಶುಭಾರಂಭ