ಕ್ಷುಲಕ ಕಾರಣಕ್ಕೆ ಗಲಾಟೆ: ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಸೇರಿ ಮೂವರ ಬಂಧನ

0
9
BAR

ಹುಬ್ಬಳ್ಳಿ: ಹುಡುಗಿ ವಿಷಯಕ್ಕೆ‌ ಸಂಬಂಧಿಸಿದಂತೆ ಹು-ಧಾ ಪಾಲಿಕೆ‌ ಸದಸ್ಯ ಚೇತನ ಹಿರೇಕೆರೂರ ಹಾಗೂ ಆತನ ಸಹಚರರು ಮೂವರ ಮೇಲೆ ಹಲ್ಲೆ ನಡೆಸಿದ ಘಟನೆ ರವಿವಾರ ತಡರಾತ್ರಿ ನಡೆದಿದ್ದು, ಚೇತನ ಸೇರಿ ಮೂವರನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ರವಿವಾರ ಗೋಕುಲ ರಸ್ತೆ ಪ್ರತಿಷ್ಠಿತ ಹೋಟೆಲವೊಂದರಲ್ಲಿ ಹುಡಗಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಪಾಲಿಕೆ‌ ಸದಸ್ಯ ಚೇತನ ಅವರ ಗುಂಪು ರಾಹುಲ್ ಸೇರಿ‌ ಇಬ್ಬರ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡಿಸಿದ್ದಾರೆ. ರಾಹುಲ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಗೋಕುಲ ರಸ್ತೆಯ ಪೊಲೀಸರು ಪರಿಶೀಲಿಸಿ ತಪಿತಸ್ಥರನ್ನು ಬಂಧಿಸಿದ್ದಾರೆ. ಗೋಕುಲ ರಸ್ತೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Previous articleಸೋಲಾರ್ ಪರವಾನಗಿ ಬಗ್ಗೆ ತನಿಖೆ: ಬಸವರಾಜ ಬೊಮ್ಮಾಯಿ
Next articleಭಾರತ ಜೋಡದಿಂದಲೂ ಇಲ್ಲ, ಖರ್ಗೆ ಅವರಿಂದಲೂ ಪರಿಣಾಮ ಇಲ್ಲ: ಶೆಟ್ಟರ