ಕ್ವಾರಿಗೆ ಬಿದ್ದು ಯುವತಿಯರು ಸಾವು

0
20

ಶ್ರೀರಂಗಪಟ್ಟಣ: ನೀರು ತುಂಬಿದ್ದ ಕ್ವಾರಿಗೆ ಬಿದ್ದು ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯ‌ ಕಳೇನಹಳ್ಳಿ‌ ಶೆಡ್ ಬಳಿ‌‌ ಸಂಭವಿಸಿದೆ. ಲೀನಾಮತಿ (19 ವರ್ಷ) ಮತ್ತು ಮೀನಾ (17 ವರ್ಷ) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿಗಳು.
ಒಟ್ಟು 4 ಮಕ್ಕಳು ಬಟ್ಟೆ ತೊಳೆಯಲೆಂದು ಈ ಹಿಂದೆ ಗಣಿಗಾರಿಕೆ ಮಾಡಿ ನೀರು ತುಂಬಿದ್ದ ಕ್ವಾರಿಯ ಹತ್ತಿರ ಹೋಗಿದ್ದು, ಅದರಲ್ಲಿ ಆರು ವರ್ಷದ ಒಂದು ಮಗು ನೀರಿಗೆ ಕಾಲುಜಾರಿ‌ ಬಿದ್ದಿದೆ. ಆ ಮಗುವನ್ನು ಕಾಪಾಡಲು ಹೋಗಿ ಈ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous articleಅಭಿವೃದ್ಧಿಯಲ್ಲಿ ಭಾರತ ವಿಶ್ವದ ಮೊದಲ ಸ್ಥಾನಕ್ಕೇರಲಿದೆ
Next articleಕಲಘಟಗಿಯಲ್ಲಿ ಜನ ಶಕ್ತಿ, ಹಣ ಶಕ್ತಿಯ ನಡುವೆ ಸಂಘರ್ಷ