ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಮೇಲೆ ಬ್ಲೇಡ್ ನಿಂದ ಹಲ್ಲೆ

0
10
ಹಲ್ಲೆ

ಬೆಳಗಾವಿ: ಖಾನಾಪೂರ ತಾಲೂಕಿನ ಲೋಂಡಾ ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಣದ ವಿಷಯದ ಕುರಿತು ಲೋಂಡಾ ಗ್ರಾಮದ ಇಬ್ಬರ ಮೇಲೆ ಬ್ಲೇಡ್ ನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಿನ್ನೆ ಸಂಜೆ ಹೊತ್ತಿಗೆ ನಡೆದಿದೆ.

ಈ ದಾಳಿಯಲ್ಲಿ ಲೋಂಡಾ ಗ್ರಾಮದ ನಿವಾಸಿ ಅಲ್ತಮೇಶ್ ನಾಯಕ್ ಮತ್ತು ಇರ್ಫಾನ್ ಸುಭಾನಿ ಎಂಬವರು ಗಂಭೀರವಾಗಿ ಗಾಯಗೊಂಡ ವ್ಯಕ್ತಿಗಳು ಈ ದಾಳಿ ಮಾಡಿದ ಆರೋಪದ ಅಡಿಯಲ್ಲಿ ಬೆಳಗಾವಿ ನಿವಾಸಿ ಆಸಿಫ್ ಜಮಾದಾರ ಮತ್ತು ಉಮರ್ ಶೇಖ್ ಅವರನ್ನು ಬಂಧಿಸಿದ್ದಾರೆ.
ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದೆ ಏನ್ನೇಂದರೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣಕಾಸಿನ ವ್ಯವಹಾರ ಇತ್ತು ಈ ವಿಷಯ ಕುರಿತು ಲೋಂಡಾ ಗ್ರಾಮದ ಇರ್ಫಾನ್ ಬೆಳಗಾವಿಯ ಒಬ್ಬನಿಗೆ ಹಣ ಬಾಕಿ ಉಳಿಸಿಕೊಂಡಿದ್ದ ಆರೋಪಿಗಳು ಅದೇ ಹಣಕ್ಕೆ ಬೇಡಿಕೆ ಮಾಡಲು ಲೋಂಡಾ ಗ್ರಾಮಕ್ಕೆ ಬಂದಾಗ ಮಾತಿನ ಚಕಮಕಿ ನಡೆದು ದೊಡ್ಡ ಜಗಳ ನಡೆದಿದೆ ಎಂದು ತಿಳಿದು ಬಂದಿದೆ. ಬ್ಲೇಡ್ ನಿಂದ ಗಾಯಗೊಂಡವರಿಗೆ ಲೋಂಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ತದನಂತರ ಬೆಳಗಾವಿಗೆ ರವಾನಿಸಲಾಗಿದೆ ಈ ಕುರಿತು ಖಾನಾಪೂರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Previous articleಕೆಎಸ್ ಆರ್ ಟಿಸಿ ಡಿವಿಜನಲ್ ಸೆಕ್ಯುರಿಟಿ ಇನ್ಸ್ ಪೆಕ್ಟರ್ ಅನುಮಾನಸ್ಪದ ಸಾವು
Next articleನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಬಂಧನ