ಕುಷ್ಟಗಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿಯನ್ನು ಪತಿಯೇ ಕೊಲೆ ಮಾಡಿದ ಘಟನೆ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಜರುಗಿದೆ.
ಕೊಲೆಯಾದ ಮಹಿಳೆ ಶರಣಮ್ಮ ಹಿರೇಮಠ(೪೨) ಎಂದು ಗುರುತಿಸಲಾಗಿದ್ದು, ಪತಿ ಶಿವಾನಂದಯ್ಯ ಹಿರೇಮಠ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಆರೋಪಿ ಪತ್ನಿಯ ಜೊತೆಗೆ ಪ್ರತಿದಿನ ಜಗಳವಾಡುತ್ತಿದ್ದನೆಂದು ಹೇಳಲಾಗಿದ್ದು, ಮಂಗಳವಾರ ಬೆಳಿಗ್ಗೆ ಕಲಹ ದೀರ್ಘಕ್ಕೆ ಹೋಗಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ತಕ್ಷಣ ಮಾಹಿತಿ ಪಡೆದುಕೊಂಡ ತಾವರಗೇರಾ ಠಾಣೆಯ ಪಿಎಸ್‌ಐ ನಾಗರಾಜ ಕೊಟ್ಟಗಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕೊಲೆ ಮಾಡಿದ ಆರೋಪಿ ಶಿವಾನಂದಯ್ಯನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.






















