ಕೋತ್ವಾಲ್ ಶಿಷ್ಯರಿಂದ ಕಾನೂನು ಸುವ್ಯವಸ್ಥೆ ಹಾಳು

0
12
ರಮೇಶ

ಬೆಳಗಾವಿ: ಕೋತ್ವಾಲ ಶಿಷ್ಯರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹೈದರಾಬಾದ್‌ನಲ್ಲಿ ಕುಳಿತು ಪೊಲೀಸರ ಮೇಲೆ ಒತ್ತಡ ಹಾಕುತ್ತಿರುವುದರಿಂದ ಪ್ರಕರಣ ದಾಖಲಿಸಲು ವಿಳಂಬವಾಗುತ್ತಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಚಾಕು ಇರಿತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಪ್ತ ಪೃಥ್ವಿ ಸಿಂಗ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಪೃಥ್ವಿ ಸಿಂಗ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದೇನೆ. ಅವರಿಗೆ ಅನ್ಯಾಯವಾಗಿದ್ದರೆ ನಾನು ಅವನ ಜತೆಯಲ್ಲಿಯೇ ನಿಲ್ಲುತ್ತೇನೆ. ಇದೇ ಮಾತನ್ನು ಅವನಿಗೂ ಹೇಳಿದ್ದೇನೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದು ಬೇಡ ಎಂದು ಹೇಳಿದ್ದೇನೆ ಎಂದರು.
ಘಟನೆ ನಡೆದು ಇಷ್ಟು ಹೊತ್ತಾದರೂ ಪೊಲೀಸರು ದೂರು ದಾಖಲು ಮಾಡಿಕೊಂಡಿಲ್ಲ. ಬೆಂಗಳೂರಿನ ದೊಡ್ಡ ಅಧಿಕಾರಿ ಪೊಲೀಸರ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯ ಸುತ್ತಮುತ್ತ ಬಹಳಷ್ಟು ಲ್ಯಾಂಡ್ ಮಾಫಿಯಾ ಕೆಲಸ ಮಾಡುತ್ತಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡದಿದ್ದರೆ ಸಿಬಿಐಗೆ ಹೋಗುತ್ತೇವೆ ಎಂದು ಅವರು ಹೇಳಿದರು.

Previous articleರೆಡ್ಡಿ ಆಯ್ಕೆಯಿಂದ ರಾಜ್ಯಗಳ ಸ್ನೇಹ ಸಂಬಂಧ ನವಯುಗಕ್ಕೆ ಕಾಲಿಟ್ಟಿದೆ
Next articleಬಿಜೆಪಿಗೆ ಯಾಕೆ ಗಾಬರಿ?