ಕೋಡಿ ಬೀಚ್ ನಲ್ಲಿ ಮೂವರು ಸಹೋದರರು ನೀರುಪಾಲು: ಇಬ್ಬರ ಸಾವು

0
33

ಕುಂದಾಪುರ: ಕುಟುಂಬದವರೊಂದಿಗೆ ಕೋಡಿ ಬೀಚ್ ನಲ್ಲಿ ಸ್ನಾನಕ್ಕೆ ಇಳಿದು ಮೂವರು ಸಹೋದರರು ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾಗಿ ಇಬ್ಬರು ಮೃತಪಟ್ಟು ಓರ್ವ ನನ್ನು ರಕ್ಷಿಸಿದ ಘಟನೆ ಡಿ. 7 ರಂದು ಶನಿವಾರ ಸಂಜೆ ಕುಂದಾಪುರ ತಾಲೂಕಿನ ಕೋಡಿ ಬೀಚ್ ನಲ್ಲಿ ಸಂಭವಿಸಿದೆ.

ಮೃತರು ಅಂಪಾರು ಗ್ರಾಮದ ಮೂಡು ಬಗೆಯ ದಾಮೋದರ ಪ್ರಭು ಹಾಗೂ ಚಿತ್ರಕಲಾ ಪ್ರಭು ದಂಪತಿಯ ಪುತ್ರರಾದ ಧನರಾಜ್ (23), ದರ್ಶನ್ (18) ಎಂದು ಗುರುತಿಸಲಾಗಿದೆ.
ಇನ್ನೊರ್ವ ಧನುಷ್(20) ನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಶನಿವಾರ ಸಂಜೆ ಕುಟುಂಬ ಸಮೇತರಾಗಿ ಕೋಡಿ ಬೀಚ್ ಗೆ ಬಂದಿದ್ದು ಇವರು ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಸಂದರ್ಭ ಕಡಲ ಅಲೆಗೆ ಈ ಮೂವರು ಸಹೋದರರು ಕೊಚ್ಚಿಕೊಂಡು ಹೋಗಿದ್ದು ತಕ್ಷಣ ಸ್ಥಳೀಯರು ಓರ್ವ ನನ್ನು ರಕ್ಷಿಸಿದ್ದಾರೆ.
ಆದರೆ ಇಬ್ಬರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿರುತ್ತಾರೆ.
ಇಬ್ಬರ ಮೃತದೇಹವನ್ನು ಸ್ಥಳೀಯರು ಸಮುದ್ರದಿಂದ ಮೇಲಕ್ಕೆ ತಂದಿದ್ದಾರೆ.

ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪಾರ್ಥಿವ ಶರೀರಗಳನ್ನು ಕುಂದಾಪುರ ಶವಗಾರಕ್ಕೆ ಸಾಗಿಸಿರುತ್ತಾರೆ.

Previous articleಕುಕ್ಕೆ: ಚಂಪಾಷಷ್ಠಿ ಮಹಾರಥೋತ್ಸವ
Next articleಸೋಲಾಪುರ-ಧಾರವಾಡ-ಸೋಲಾಪುರ ಪ್ಯಾಸೆಂಜರ್ ರೈಲುಗಳಿಗೆ ಮರು ಸಂಖ್ಯೆ