ಕೊರಿಯನ್ ಸೇರಿದಂತೆ 13 ಭಾಷೆಯಲ್ಲೂ ಕರುನಾಡ ಮಾರ್ಟಿನ್

0
28

ಬೆಂಗಳೂರು: ಜಗತ್ತಿನಾದ್ಯಂತ ಒಂದೇ ದಿನದಲ್ಲಿ 13 ಭಾಷೆಗಳಲ್ಲಿ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಫಸ್ಟ್ ಟ್ರೈಲರ್ ಬಿಡುಗಡೆಯಾಗಲಿದೆ.
ಆಗಸ್ಟ್ 5 ರಂದು ಸಂಜೆ 5 ಗಂಟೆ 55 ನಿಮಿಷಕ್ಕೆ ಟ್ರೇಲರ್ ಬಿಡುಗಡೆಯಾಗಲಿದೆ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಅರೇಬಿಕ್, ಜಪಾನೀಸ್, ಚೈನೀಸ್, ರಷ್ಯನ್, ಅರೇಬಿಕ್, ಸ್ಪ್ಯಾನಿಷ್ ಮತ್ತು ಕೊರಿಯನ್ ಭಾಷೆಗಳಲ್ಲಿ ಮಾರ್ಟಿನ್ ಫಸ್ಟ್ ಟ್ರೈಲರ್ ಬಿಡುಗಡೆಯಾಗಲಿದೆ. ಎ.ಪಿ.ಅರ್ಜುನ್‌ ನಿರ್ದೇಶನದ, ಉದಯ್ ಮೆಹ್ತಾ ನಿರ್ಮಾಣದಲ್ಲಿ ಸಿದ್ದವಾಗುತ್ತಿರುವ ಚಿತ್ರದಲ್ಲಿ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್ ಮತ್ತು ನಿಕಿತಿನ್ ಧೀರ್ ನಟಿಸಿದ್ದಾರೆ, ಮಾರ್ಟಿನ್ ಸಿನಿಮಾದೆ ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಈ ಚಿತ್ರ ಅಕ್ಟೋಬರ್-11ರಂದು ಬಿಡುಗಡೆಯಾಗಲಿದೆ.

Previous articleಸನ್ಸೇರಾ ಕಂಪನಿಯಿಂದ ಹೂಡಿಕೆ: 3,500 ಉದ್ಯೋಗ ಸೃಷ್ಟಿ
Next articleವಯನಾಡ್‌ ದುರಂತ: ಭೂಕುಸಿತದ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ನೀಡಲಾಗಿತ್ತು…