ಕೈ ನಾಯಕ ಆಡಿಯೋ ವೈರಲ್‌

0
18
ಬೆಳಗಾವಿ ಆಡಿಯೋ ವೈರಲ್

ಬೆಳಗಾವಿ: ಅರಭಾವಿ ಕಾಂಗ್ರೆಸ್ ಟಿಕೆಟ್ ವಿಷಯದಲ್ಲಿ ಕೈ ನಾಯಕರಿಬ್ಬರ ವಾಗ್ವಾದದ ಆಡಿಯೋ ವೈರಲ್ ಆಗಿದೆ. ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ ಮತ್ತು ಗೋಕಾಕದ ಅರವಿಂದ ದಳವಾಯಿ ನಡುವೆ ಈ ವಾಗ್ವಾದ ನಡೆದಿದೆ.
ಅರಬಾವಿ ಟಿಕೆಟ್ ವಿಚಾರಕ್ಕೆ ಪರಸ್ಪರ ಸವಾಲ್ ಪ್ರತಿ ಸವಾಲ್ ಹಾಕಿದ ನಾಯಕರು ವಾದ ಮಾಡಿದ್ದಾರೆ. ಕ್ಷೇತ್ರವಾರು ಟಿಕೆಟ್ ಹಂಚಿಕೆ ಬಗ್ಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಸಭೆ ನಡೆದಿತ್ತು. ಈ ಸಭೆಯಲ್ಲಿ ಅರಬಾವಿ ಕಾಂಗ್ರೆಸ್ ನಾಯಕರ ಟಿಕೆಟ್ ಸಂಬಂಧ ಚರ್ಚೆ ಬಂದಾಗ ಜೆಡಿಎಸ್ ಪರಾಜಿತ ಅಭ್ಯರ್ಥಿ ಭೀಮಪ್ಪ ಗಡಾದ್ ಪಕ್ಷಕ್ಕೆ ಕರೆತರಲು ಮಾಜಿ ಶಾಸಕ ಅಶೋಕ ಪಟ್ಟಣ ಪ್ರಸ್ತಾಪ ಮಾಡಿದರು. ಕಳೆದ ಚುನಾವಣೆಯಲ್ಲಿ 50 ಸಾವಿರ ಮತ ಪಡೆದಿರೋ ಭೀಮಪ್ಪ ಗಡಾದ್, ಅಶೋಕ ಪಟ್ಟಣ ತೀವ್ರ ಲಾಬಿ ಮಾಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕರೆ ಮಾಡಿದ ದಳವಾಯಿ ಅವರು ಪಟ್ಟಣ ಅವರಿಗೆ ಎಚ್ಚರಿಕೆ ಧಾಟಿಯಲ್ಲಿ ಮಾತನಾಡಿದರು. ನನ್ನ ಟಿಕೆಟ್ ತಪ್ಪಿಸಿದ್ರೆ ನಾನು ಸುಮ್ಮನೆ ಕುಳಿತುಕೊಳ್ಳಲ್ಲ. ನಾನು ರಾಮದುರ್ಗಕ್ಕೆ ಬರುತ್ತೇನೆ ಎಂದರು. ಅರವಿಂದ ದಳವಾಯಿ ತಾಕತ್ತು ಎನ್ನುವ ಶಬ್ದ ಪ್ರಯೋಗ ಬಳಕೆ ಮಾಡಿದರು. ಇದನ್ನು ಅಷ್ಟೇ ಸವಾಲಾಗಿ ಸ್ವೀಕರಿಸಿದ ಪಟ್ಟಣರು, ನಿಮ್ಮ ತಾಕತ್ತು ನೀವು, ನಮ್ಮ ತಾಕತ್ತು ನಾವು ಮಾಡುತ್ತೇವೆ ಎಂದು ಉತ್ತರ ಕೊಟ್ಟರು.

Previous articleಕಾಂಗ್ರೆಸ್ ಸಹವಾಸದಿಂದ ಸತೀಶ್ ದುಡುಕಿದ್ದಾರೆ: ಸಿಎಂ
Next articleಅಪ್ಪು ನೆನದ ಬಿಗ್‌ಬಿ