ಕೇಜ್ರೀ ಜಾಮೀನು: ತೀರ್ಪು ಕಾಯ್ದಿರಿಸಿದ ಸುಪ್ರೀಂ

0
15

ದೆಹಲಿ: ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ನಿಂದ ಆಗಿರುವ ಬಂಧನ ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇರ್ಜಿವಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಆ ಮೂಲಕ ತಕ್ಷಣಕ್ಕೆ ಬಂಧಮುಕ್ತವಾಗಬಹದು ಎಂಬ ಅರವಿಂದ್ ಕೇಜ್ರಿವಾಲ್‌ರ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ.
ಸಿಬಿಐ ತಮ್ಮನ್ನು ಬಂಧಿಸಿದ್ದನ್ನ ಪ್ರಶ್ನಿಸಿ ಒಂದು ಅರ್ಜಿ ಹಾಗೂ ದೆಹಲಿ ಹೈಕೋರ್ಟ್ನಲ್ಲಿ ಜಾಮೀನು ನಿರಾಕರಣೆ ಆಗಿದ್ದನ್ನ ಪ್ರಶ್ನಿಸಿ ಮತ್ತೊಂದು ಅರ್ಜಿಯನ್ನ ಕೇಜ್ರಿವಾಲ್ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳನ್ನ ಪರಿಶೀಲಿಸಿ ವಾದ ಪ್ರತಿವಾದವನ್ನ ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ನ್ಯಾ. ಉಜ್ವಲ್ ಭುಯಾನ್ ಅವರಿದ್ದ ಪೀಠ ತೀರ್ಪನ್ನು ಕಾಯ್ದಿರಿಸಿದೆ. ಮುಂದಿನ ಮಂಗಳವಾರ ಹೆಚ್ಚುವರಿ ವಾದ ಪ್ರತಿವಾದವನ್ನ ಆಲಿಸುವುದಾಗಿ ನ್ಯಾಯಾಲಯ ಹೇಳಿದೆ. ಕೆಲ ದಿನಗಳ ಹಿಂದಷ್ಟೇ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್‌ರ ನ್ಯಾಯಾಂಗ ಬಂಧನವನ್ನು ಸೆ.೧೧ರವರೆಗೆ ವಿಸ್ತರಿಸಿತ್ತು ಹಾಗೂ ಕೇಜ್ರಿವಾಲ್ ಸಲ್ಲಿಸಿದ್ದ ಬೇಲ್ ಅರ್ಜಿಯನ್ನೂ ತಿರಸ್ಕರಿಸಿತ್ತು. ಅಷ್ಟೇ ಅಲ್ಲ ಸಿಬಿಐ ಬಂಧನದಲ್ಲಿ ಯಾವುದೇ ದುರುದ್ದೇಶ ಇಲ್ಲ ಅಂತಲೂ ದೆಹಲಿ ಹೈಕೋರ್ಟ್ ಹೇಳಿತ್ತು.

Previous articleಇವಿ ವಾಹನಗಳಿಗೆ ಇನ್ನು ಸಬ್ಸಿಡಿ ಅಗತ್ಯವಿಲ್ಲ
Next articleವಿರಾಟ್ ಕೊಹ್ಲಿ ಶ್ರೀಮಂತ ಕ್ರಿಕೆಟ್ ಪಟು