ಕೇಜ್ರಿ ಬಂಧನ: ಉಪವಾಸ ಸತ್ಯಾಗ್ರಹ

0
10

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾನುವಾರ ದೇಶವಿದೇಶಗಳಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಿದೆ. ದೇಶದ ಹಲವಾರು ರಾಜ್ಯಗಳಲ್ಲಲ್ಲದೆ, ವಿದೇಶಗಳಲ್ಲಿ ಬೋಸ್ಟನ್, ವ್ಯಾಂಕೋವರ್, ಟೆಕ್ಸಾಸ್, ಮೆಲ್ಬೋರ್ನ್, ಟೈಮ್ಸ್ ಸ್ಕಾರ‍್ಸ್ ಮತ್ತು ಇನ್ನೂ ಅನೇಕ ದೇಶಗಳಲ್ಲಿ ಕೇಜ್ರಿವಾಲ್ ಪರ ನಾಯಕರು ಹಾಗೂ ಬೆಂಬಲಿಗರು ಪ್ರತಿಭಟನೆಗಳು ನಡೆಸಿದರು. ಇದೇ ವೇಳೆ ಆಮ್ ಆದ್ಮಿ ಪಾರ್ಟಿಯ ಪ್ರತಿಭಟನೆಗೆ ಪ್ರತಿಕ್ರಮವಾಗಿ ಬಿಜೆಪಿಯೂ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ವೇಳೆ ಆಮ್ ಆದ್ಮಿ ಪಾರ್ಟಿ ಹಾಗೂ ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ನಡೆದಿದೆ.

Previous articleಖಾಸಗಿ ಬಸ್ ಉರುಳಿ ಮೂವರ ದುರ್ಮರಣ
Next articleರಮೇಶ್ ಕುಮಾರ್ ರಾಜಕೀಯ ನಿವೃತ್ತಿ ಘೋಷಣೆ