ಉಡುಪಿ: ಮೋದಿ ಪ್ರಧಾನಿಯಾಗಿ 9 ವರ್ಷಗಳ ಸಾಧನೆ ಬಿಂಬಿಸುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಮಣಿಪಾಲದಲ್ಲಿ ಆಯೋಜಿರುವ ಪ್ರಬುದ್ಧರ ಗೋಷ್ಠಿಗೆ ಆಗಮಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷ್ಣಮಠಕ್ಕೆ ಭೇಟಿ ನೀಡಿದರು. ಬಳಿಕ ಅದಮಾರು ಮಠಕ್ಕೆ ಭೇಟಿ ನೀಡಿ ಚಾತುರ್ಮಾಸ್ಯ ವ್ರತ ದೀಕ್ಷಿತರಾಗಿರುವ ಹಿರಿಯ ಮಠಾಧೀಶ ಶ್ರೀ ವಿಶ್ವಪಪ್ರಿಯತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.




























