ಕುವೆಂಪು ನಿವಾಸ ಸ್ಮಾರಕವಾಗಿಸಲು ಸರ್ಕಾರ ಮುಂದಾಗಲಿ

0
48

ಬೆಂಗಳೂರು: ಕುವೆಂಪು ಅವರ ಉದಯರವಿ ನಿವಾಸವವನ್ನ ಸ್ಮಾರಕವಾಗಿ ಪರಿವರ್ತನೆ ಮಾಡಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕುವೆಂಪು ಅವರು ನಮ್ಮ ಕರ್ನಾಟಕಕ್ಕೆ ನಾಡಗೀತೆ ಕೊಟ್ಟ ರಾಷ್ಟ್ರಕವಿ, ಇಡೀ ವಿಶ್ವಕ್ಕೆ ವಿಶ್ವಮಾನವ ಸಂದೇಶ ಕೊಟ್ಟ ರಸಋಷಿ. ಇಂತಹ ಶ್ರೇಷ್ಠ ವ್ಯಕ್ತಿ ಬಾಳಿ ಬದುಕಿದ ಮನೆಯನ್ನ ಸ್ಮಾರಕವಾಗಿ ಪರಿವರ್ತನೆ ಮಾಡಿ ಕನ್ನಡದ ದೇಗುಲದಂತೆ ಕಾಪಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಆದರೆ ಸರ್ಕಾರದ ನಿರಾಸಕ್ತಿಯಿಂದ ಈಗ ಕುಟುಂಬದವರೇ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವುದು ನಾವೆಲ್ಲರೂ ತಲೆತಗ್ಗಿಸಬೇಕಾದ ಸಂಗತಿ. ಸರ್ಕಾರ ಈ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಕುವೆಂಪು ಅವರ ಉದಯರವಿ ನಿವಾಸವವನ್ನ ಸ್ಮಾರಕವಾಗಿ ಪರಿವರ್ತನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

Previous articleಸಿದ್ದರಾಮಯ್ಯ ಪಂಜರದ‌ ಗಿಣಿ ಆಗಿದ್ದಾರೆ
Next articleFIR ಹಾಕಿಸುವುದೇ ಪ್ರಿಯಾಂಕ್ ಖರ್ಗೆ ಫುಲ್ ಟೈಮ್ ಕೆಲಸ