ಕುಲಸಚಿವರಿಗೆ ನೋಟಿಸ್

0
18

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ೮೭ ಲಕ್ಷ ರೂ. ಗೂ ಅಧಿಕ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಜೆಸ್ಕಾಂನ ಕಮಲಾಪುರ ಶಾಖೆಯ ಎಂಜನಿಯರ್ ವಿವಿ ಕುಲಸಚಿವರಿಗೆ ಕರೆಂಟ್ ಸರಬರಾಜು ಕಡಿತಗೊಳಿಸುವ ನೋಟಿಸ್ ನೀಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಭಾರಿ ಮೊತ್ತದ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿರುವ ವಿವಿಯ ಮೂರು ವಿದ್ಯುತ್ ಸ್ಥಾವರಗಳಿಗೆ ಕರೆಂಟ್ ಸರಬರಾಜು ಕಡಿತ ಮಾಡಲಾಗುವುದು ಎಂದು ಡಿ. ೨೧ರಂದೇ ವಿವಿ ಕುಲಸಚಿವ ವಿಜಯ್ ಪೂಣಚ್ಚ ತಂಬಂಡ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಒಂದು ವೇಳೆ ಕರೆಂಟ್ ಕಡಿತಗೊಳಿಸಿದರೆ ವಿಶ್ವವಿದ್ಯಾಲಯ ಕತ್ತಲೆಗೆ ಜಾರಲಿದೆ. ಈಗಾಗಲೇ ವಿವಿ ಬಳಿ ನಯಾಪೈಸೆ ಇಲ್ಲ. ಈಗ ಕರೆಂಟ್ ಬಿಲ್ ನೋಟಿಸ್ ಜಾರಿ ಮಾಡಿರುವುದರಿಂದ ವಿವಿ ಆಡಳಿತ ಮಂಡಳಿ ಕಂಗಾಲಾಗಿದೆ. ಈಗಾಗಲೇ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ವಿವಿ ಸಮಸ್ಯೆ ಹಾಗೇ ಉಳಿದಿದೆ.

Previous articleವಂಚನೆ ಪ್ರಕರಣ, ೭ ಮಂದಿ ಬಂಧನ
Next articleಅದು ಚೆಕ್ ಬೌನ್ಸ್ ಪ್ರಕರಣ ಅಲ್ಲ