ಬೆಳಗಾವಿ: ಚಡ್ಡಿ ಕಿಸೆಯಲ್ಲಿ ಹಾಕಿದ್ದ ಪಟಾಕಿ ಸಿಡಿದ ಪರಿಣಾಮವಾಗಿ ಬಾಲಕನ ಮರ್ಮಾಂಗಕ್ಕೆ ತೀವ್ರ ಗಾಯಗೊಂಡಿರುವ ಘಟನೆ ಇಲ್ಲಿನ ರಾಮನಗರದಲ್ಲಿ ನಡೆದಿದೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಈ ವೇಳೆ ರಾಮನಗರದ ಹನುಮಂತ ಗಾಡಿವಡ್ಡರ(೧೨) ಬಾಲಕ ಪಟಾಕಿಗೆ ಬೆಂಕಿ ಹಚ್ಚಿದಾಗ ಅದು ಸಿಡಿಯದ ಕಾರಣ ಪಟಾಕಿ ಹತ್ತಿಲ್ಲ ಎಂದು ಭಾವಿಸಿ ಚಡ್ಡಿ ಕಿಸೆಯಲ್ಲಿ ಹಾಕಿಕೊಂಡಿದ್ದ. ಆದರೆ ಕಿಸೆಗೆ ಹಾಕಿದ್ದ ಪಟಾಕಿ ಅಲ್ಲಿಯೇ ಸಿಡಿದ ಕಾರಣ ಬಾಲಕನ ಮರ್ಮಾಂಗಕ್ಕೆ ತೀವ್ರ ಗಾಯವಾಗಿದೆ. ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.