ಕಿಮ್ಸ್‌ಗೆ ಪೊಲೀಸ್ ಆಯುಕ್ತ ಭೇಟಿ: ಸಿಬ್ಬಂದಿ ಆರೋಗ್ಯ ವಿಚಾರಣೆ

0
14

ಹುಬ್ಬಳ್ಳಿ: ಅಂತಾರಾಜ್ಯ ಕುಖ್ಯಾತ ಧರೋಡೆಕಾರ ಫರಾನ್ ಶೇಖ್ ಸಹಚರರ ಬಂಧನದ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ ವೇಳೆ ಫೈರಿಂಗ್ ಮಾಡಲಾಗಿದೆ. ಪೊಲೀಸರಿಗೂ ಗಾಯವಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹೇಳಿದರು.
ಶುಕ್ರವಾರ ಬೆಳಗ್ಗೆ ಕಿಮ್ಸ್ ಗೆ ಭೇಟಿ ನೀಡಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿ ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಆರೋಪಿಯ ಸಹಚರರ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನ ಮಾಡುವಾಗ ಗುಂಡು ಹಾರಿಸಲಾಗಿದೆ. ಫರಾನ್ ಮೇಲೆ‌ ಪೈರಿಂಗ್ ಮಾಡಲಾಗಿದೆ. ಪಿಎಸ್ ಐ ಕವಿತಾ ಮಡಗ್ಯಾಳ, ಸಿಬ್ಬಂದಿ ಮಹೇಶ, ಸುಜಾತ್ ಅವರಿಗೂ ಗಾಯ ಆಗಿದೆ ಎಂದರು.
ಪಿಎಸ್ ಐ ಕವಿತಾ ಮಾಡಗ್ಯಾಳ ಎರಡು ಬಾರಿ ಗಾಳಿಯಲ್ಲಿ ಗುಂಡು‌ ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಫೈರಿಂಗ್ ಮಾಡಲಾಗಿದೆ. ಫರಾನ್ ಶೇಖ್ ವಿರುದ್ಧ ವಿವಿಧ ರಾಜ್ಯದಲ್ಲಿ ೧೫ ಪ್ರಕರಣಗಳಿವೆ ಎಂದರು.

Previous articleಬಾಗಲಕೋಟೆ: ೪ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ
Next articleಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ನಾಯಕರಾಗಬೇಕು