ಹುಬ್ಬಳ್ಳಿ : ಇಲ್ಲಿನ ಮೂರುಸಾವಿರಮಠದಿಂದ ಅದ್ಧೂರಿ ಮೆರವಣಿಗೆಯಲ್ಲಿ ಕರೆತಂದ ಶ್ರೀರಾಮರೂಪಿ ಗಣೇಶ ಮೂರ್ತಿಯನ್ನು ಕಿತ್ತೂರು ಚನ್ನಮ್ಮ ಮೈದಾನ ( ಈದ್ಗಾ ಇರುವ ಸ್ಥಳ ) ದಲ್ಲಿ ಪ್ರತಿಷ್ಠಾಪನೆ ಪೂಜಾ ವಿಧಾನಗಳನ್ನು ನೆರವೇರಿಸಿ ಕಿತ್ತೂರು ಚನ್ನಮ್ಮ ಮೈದಾನ ಗಜಾನನ ಮಂಡಳಿಯು ಪ್ರತಿಷ್ಠಾಪನೆ ಮಾಡಿತು.
ಮೂರುಸಾವಿರಮಠದ ಬಳಿ ಗಣೇಶನ ಭವ್ಯ ಮೆರವಣಿಗೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ಬಳಿಕ ವಿವಿಧ ವಾದ್ಯವೃಂದ ಜಯಘೋಷಗಳೊಂದಿಗೆ ಸಾಗಿ ಬಂದ ಗಣೇಶಮೂರ್ತಿಯನ್ನು ಅದ್ಧೂರಿಯಾಗಿ ಚನ್ನಮ್ಮ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು.
ಕಿತ್ತೂರು ಚನ್ನಮ್ಮ ಮೈದಾನ ಗಜಾನನ ಮಂಡಳಿ ಅದ್ಯಕ್ಷ ಸಂಜು ಬಡಸ್ಕರ್, ಶಾಸಕ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಉದ್ಯಮಿ ಡಾ.ವಿಎಸ್ ವಿ ಪ್ರಸಾದ್ , ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ,ಅವರ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು.ಗಜಾನನ ಮಂಡಳಿ ಸದಸ್ಯರು ಇದ್ದರು.