ಕಾರಿನ ಸ್ಟೆಪ್ನಿಯಲ್ಲಿ ಪತ್ತೆಯಾದ ಹಣ

0
25

ಕಾರಿನ ಸ್ಟೆಪ್ನಿಯಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ಹಣವನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ವೇಳೆ ಪತ್ತೆ ಹಚ್ಚಿದ ಘಟನೆ ನಡೆದಿದೆ.
ಜಾರ್ಖಂಡ್‌-ಬಿಹಾರ ಗಡಿಯಲ್ಲಿರುವ ಬುದ್ವಾಡಿನ್ (ಸರೌನ್) ಚೆಕ್ ಪೋಸ್ಟ್‌ನಲ್ಲಿ ನಡೆದಿದೆ. ಗಿರಿದಿಹ್ ಜಿಲ್ಲೆಯ ಜಾರ್ಖಂಡ್-ಬಿಹಾರ ಗಡಿಯ ಸಮೀಪದಲ್ಲಿರುವ ಡಿಯೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್‌ಪಾಯಿಂಟ್‌ನಲ್ಲಿ ವಾಹನ ತಪಾಸಣೆಯ ವೇಳೆ ನಗದು ಪತ್ತೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ, ಈ ವೀಡಿಯೊವನ್ನು ಬಿಜೆಪಿ ಜಾರ್ಖಂಡ್‌ನ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರು ಮರು ಹಂಚಿಕೊಂಡಿದ್ದಾರೆ, ಅವರು ಕಾಂಗ್ರೆಸ್ ಮತ್ತು ಜೆಎಂಎಂ “ಹಣಬಲ” ಬಳಸಿಕೊಂಡು ಚುನಾವಣೆಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Previous articleಆಪರೇಶನ್ ಮಾಡುವುದರಲ್ಲಿ‌ ಬಿಜೆಪಿಯವರು ನಿಸ್ಸೀಮರು
Next articleವಿಜಯ ಸಾರಥ್ಯಕ್ಕೆ ಒಂದು ವರ್ಷ