Home Advertisement
Home ತಾಜಾ ಸುದ್ದಿ ಕಾರಂಜಾ ಜಲಾಶಯ: ಸಂತ್ರಸ್ತರ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ

ಕಾರಂಜಾ ಜಲಾಶಯ: ಸಂತ್ರಸ್ತರ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ

0
114

ಬೆಳಗಾವಿ: ಬೀದರಿನ ಕಾರಂಜಾ ಜಲಾಶಯ ಯೋಜನೆಯ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವ ಕುರಿತಾದ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಗುರುವಾರ ಸುವರ್ಣ ಸೌಧದಲ್ಲಿ ಕಾರಂಜಾ ಯೋಜನೆ ಸಂತ್ರಸ್ರರ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ, ಸಂತ್ರಸ್ತರ ಬೇಡಿಕೆ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು. ತಮ್ಮನ್ನು ಭೇಟಿ ಮಾಡಿದ ನಿಯೋಗ ಮತ್ತು ಮುಖಂಡರುಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ತಾಂತ್ರಿಕ ಸಮಿತಿಯೊಂದನ್ನು ರಚಿಸಿ, ಸಮಿತಿ ನೀಡುವ ವರದಿಯಾಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರಂಜಾ ಜಲಾಶಯ ನಿರ್ಮಾಣಕ್ಕೆ 1972-73ರಲ್ಲಿ ಭೂಸ್ವಾಧೀನವಾಗಿತ್ತು. ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ ರೂ. 3000 ದಂತೆ 1981-86ರಲ್ಲಿ ಆಗಿನ ಮಾರುಕಟ್ಟೆ ಬೆಲೆ ಆಧರಿಸಿ ಪರಿಹಾರ ನೀಡಲಾಗಿತ್ತು. ಆದರೆ ಪರಿಹಾರ ಧನದ ಬಗ್ಗೆ ತಕರಾರು ಎತ್ತಿ ನ್ಯಾಯಾಲಯದ ಮೊರೆ ಹೋದ ಸಂತ್ರಸ್ತರು ಹೆಚ್ಚು ಪರಿಹಾರ ಧನ ಪಡೆದಿದ್ದರು. ನ್ಯಾಯಾಲಯದ ಮೊರೆ ಹೋಗದ ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದರು.
ಸಚಿವರಾದ ರಹೀಂ ಖಾನ್, ಕೆಕೆಡಿಬಿ ಅಧ್ಯಕ್ಷ ಅಜಯ ಸಿಂಗ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Previous articleಸದನದಲ್ಲಿ ಅಂಬೇಡ್ಕರ್‌ ಭಾವಚಿತ್ರವಿಟ್ಟು ಪ್ರತಿಭಟನೆ
Next articleಸಿ.ಟಿ ರವಿ ಅಸಭ್ಯ ಪದ ಬಳಕೆ: ಕ್ರಿಮಿನಲ್ ಅಪರಾಧ