ಕಾಕತಾಳೀಯವೋ, ಸರ್ಕಾರದಿಂದ ಪ್ರೇರಿತವೋ

0
13

ಬೆಂಗಳೂರು: ಶ್ರೀ ರಾಮನ ಧ್ವಜ, ಅಲಂಕಾರಿಕ ವಸ್ತುಗಳನ್ನು ಹಾಕ್ಕಿದರೆ ಕಿತ್ತುವುದು, ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುತ್ತೆ ಅಂತ ಹೇಳುವುದು ಕಾಕತಾಳೀಯವೋ, ಸರ್ಕಾರದಿಂದ ಪ್ರೇರಿತವೋ ಹೇಳಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನಿನ್ನೆ ಬೆಂಗಳೂರಿನಲ್ಲಿ ಶ್ರೀ ರಾಮನವಮಿಯ ಪ್ರಯುಕ್ತ ಕಾರಿನಲ್ಲಿ ಶ್ರೀ ರಾಮ ಘೋಷಣೆ ಕೂಗುತ್ತ ಹೊರಟಿದ್ದ ಹಿಂದೂಗಳನ್ನು ನಿಲ್ಲಿಸಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುರುದಕ್ಕೆ ಈ ಘಟನೆ ತಾಜಾ ಉದಾಹರಣೆ. ಹಿಂದೂ ಹಬ್ಬಗಳಂದು ಬೇರೆ ಕೋಮಿನವರ ಅನುಮತಿ ಕೋರಿ ಘೋಷಣೆ ಕೂಗುವುದು, ಶ್ರೀ ರಾಮನ ಧ್ವಜ, ಅಲಂಕಾರಿಕ ವಸ್ತುಗಳನ್ನು ಹಾಕ್ಕಿದರೆ ಕಿತ್ತುವುದು, ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುತ್ತೆ ಅಂತ ಹೇಳುವುದು ಕಾಕತಾಳೀಯವೋ, ಸರ್ಕಾರದಿಂದ ಪ್ರೇರಿತವೋ ಹೇಳಬೇಕು..ಒಟ್ಟಿನಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ಈ ರೀತಿಯಾದ ಹಿಂದೂಗಳ ಮೇಲೆ ಹಲ್ಲೆ ಹೆಚ್ಚಾಗಿ ಒಂದು ಕೋಮಿನವರು ತಮ್ಮ ಪ್ರಾಬಲ್ಯ ಬೀರುತ್ತಿರುವುದು ಸತ್ಯ ಎಂದಿದ್ದಾರೆ.

Previous articleಐಸ್ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು!
Next articleನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ