ಕಾಂಗ್ರೆಸ್ ಹಿಂದೂಗಳನ್ನು ದಮನ ಮಾಡಿದಷ್ಟು ಬಲಿಷ್ಠವಾಗುತ್ತದೆ

0
36

ಕಾವೂರು: ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪಕ್ಷಹುಬ್ಬಳ್ಳಿ ಘಟನೆ, ಹಿಜಾಬ್ ಹೋರಾಟ ಸಹಿತ ಮುಸ್ಲಿಂ ವರ್ಗದ ಪೊಲೀಸ್‌ ಕೇಸುಗಳನ್ನು ವಾಪಾಸ್ ಪಡೆದು ಹಿಂದೂಗಳ ಮೇಲಿನ ಕೇಸ್ ಹಿಂದಕ್ಕೆ ಪಡೆಯದೆ ದಮನಕಾರಿ ನೀತಿ ಅನುಸರಿಸುತ್ತಿದೆ. ಸರಕಾರ ಹಚ್ಚುತ್ತಿರುವ ತಾರತಮ್ಯದ ಬೆಂಕಿ ಭವಿಷ್ಯದಲ್ಲಿ ಕಾಂಗ್ರೆಸ್‌ನ್ನು ಸುಡಲಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ನಿಮ್ಮ ಸರಕಾರದ ಹಗರಣವನ್ನು ಮರೆ ಮಾಚಲು ವಿಷಯಾಂತರ ಮಾಡುತ್ತಿರುವುದು ತಿಳಿಯದ ವಿಚಾರವಲ್ಲ. ರಾಜ್ಯವನ್ನು ಅಭಿವೃದ್ಧಿಯತ್ತಾ ಕೊಂಡೊಯ್ಯುವ ಬದಲು ಹಿಂದೂಗಳನ್ನು ಬಗ್ಗು ಬಡಿಯುವ ಕೆಲಸಕ್ಕೆ ಕೈ ಹಾಕಿರುವುದು ದುರಂತ.
ನಿಮ್ಮ ಸರಕಾರ ಹಿಂದೂಗಳನ್ನು ತುಳಿದಷ್ಟೂ ಬಲಿಷ್ಠವಾಗುತ್ತಾ ಹೋಗುತ್ತದೆ. ಕೇವಲ ಅಲ್ಪಸಂಖ್ಯಾತರ ಮತದಿಂದ ಮಾತ್ರ ನಿಮ್ಮಸರಕಾರ ಅಸ್ಥಿತ್ವಕ್ಕೆ ಬಂದಿಲ್ಲ.
ಹಿಂದೂ ಸಮುದಾಯವೂ ನಿಮ್ಮನ್ನು ಬೆಂಬಲಿಸಿ ಅಧಿಕಾರದಲ್ಲಿ ಕೂರಿಸಿದ್ದಾರೆ. ಇದೀಗ ಕೇವಲ ಒಂದು ವರ್ಗಕ್ಕೆ ಮಾತ್ರ ಸವಲತ್ತು, ಕಾನೂನು ವಾಪಾಸ್‌ ಮತ್ತಿತರ ಸೌಲಭ್ಯ ಕಲ್ಪಿಸುತ್ತಿರುವುದು ಹಿಂದೂ ವಿರೋಧಿ ಎಜೆಂಡಾದ ಒಂದು ಸಂಚು ಎಂದು ಆರೋಪಿಸಿರುವ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು, ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.

Previous articleಬೆಂಗಳೂರು: ಮತ್ತೊಂದು ವಿಮಾನ ನಿಲ್ದಾಣಕ್ಕೆ ಭರದ ಸಿದ್ಧತೆ
Next articleಆರ್‌ಸಿಬಿ ಸಮಾವೇಶಕ್ಕೆ ಹೆಚ್ಚು ಜನ ಪಾಲ್ಗೊಳ್ಳಿ