Home Advertisement
Home ನಮ್ಮ ಜಿಲ್ಲೆ ಕಲಬುರಗಿ ಕಾಂಗ್ರೆಸ್ ಬಸ್ ಯಾತ್ರೆ ಪಂಚರ್: ರವಿಕುಮಾರ್

ಕಾಂಗ್ರೆಸ್ ಬಸ್ ಯಾತ್ರೆ ಪಂಚರ್: ರವಿಕುಮಾರ್

0
139

ಕಲಬುರಗಿ: ಕಾಂಗ್ರೆಸ್ ಬಸ್ ಯಾತ್ರೆ ಪಂಚರ್ ಆಗುತ್ತದೆ ಎಂದು ಎಂಎಲ್‌ಸಿ ರವಿಕುಮಾರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಕಾಲ ಅದು ಕತ್ತಲೆಯ ಕಾಲ. ರಾಜ್ಯದಲ್ಲಿ ನಲವತ್ತು ಪರ್ಸೆಂಟೇಜ್ ಸರ್ಕಾರ ಅಂತ ಕಾಂಗ್ರೆಸ್ ಹೇಳುತ್ತಿದೆ. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ 50ಕ್ಕಿಂತಲೂ ಹೆಚ್ಚು ಪರ್ಸೆಂಟೇಜ್ ನಡೆದಿದೆ. 9.47 ಕಿಲೋ ಮೀಟರ್‌ಗೆ 75 ಕೋಟಿ ರೂಪಾಯಿಗೆ ಟೆಂಡರ್ ಕರೆಯಲಾಗಿತ್ತು. ಇದನ್ನು 53ರಷ್ಟು ಹೆಚ್ಚು ಮಾಡಿದ್ದರು. ಇದನ್ನು 115 ಕೋಟಿ ರೂಪಾಯಿಗೆ ಹೆಚ್ಚು ಮಾಡಿದ್ದರು. 2016, 17ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಟೆಂಡರ್ ಹಗರಣ, ಬೆಂಗಳೂರು ನಗರದಲ್ಲಿ ನಡೆದ ರಸ್ತೆ ಕಾಮಗಾರಿಯಲ್ಲಿ ನಡೆದ ಅವ್ಯವಹಾರ, ಕಾಂಗ್ರೆಸ್ ಸರ್ಕಾರದ್ದು. ಸಿದ್ದರಾಮಯ್ಯ ಸರ್ಕಾರ 53 ಪರ್ಸೆಂಟೇಜ್ ಸರ್ಕಾರವಾಗಿತ್ತು. ಬೆಂಗಳೂರು ಸಿಟಿ ಟೆಂಡರ್ ಶ್ಯೂರ್ ರಸ್ತೆಯಲ್ಲಿ 7.5 ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ 58 ಕೋಟಿ ರೂಪಾಯಿಗೆ ಟೆಂಡರ್ ಆಗಿತ್ತು.
ಆದ್ರೆ ಅದನ್ನು ನಂತರ 87 ಕೋಟಿ ರೂಪಾಯಿಗೆ ಹೆಚ್ಚು ಮಾಡಿ ಶೇಕಡಾ 47ರಷ್ಟು ಮೊತ್ತವನ್ನು ಹೆಚ್ಚು ಮಾಡಿದ್ರು ಈ ಬಗ್ಗೆ ಕೂಡಲೇ ತನಿಖೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.