ಕಾಂಗ್ರೆಸ್’ನ ಕ್ರಮ ಮನೆಗೆ ಮಾರಿ, ಪರರಿಗೆ ಉಪಕಾರಿ

0
18

ಬೆಂಗಳೂರು: ತಮಿಳುನಾಡು ನೀರಿನ ವಿಷಯದಲ್ಲಿ ರಾಜ್ಯದ ಮುಂದಿನ ನಡೆಯ ಬಗ್ಗೆ ಸರ್ವಪಕ್ಷಗಳ ಸಭೆ ಕರೆದ ವಿಚಾರವಾಗಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಟ್ವೀಟ್‌ ಮೂಲಕ ಚಾಟಿ ಬಿಸಿದ್ದಾರೆ. ಸರ್ವಪಕ್ಷಗಳ ಸಭೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು “ಊರೆಲ್ಲ ದೋಚಿಕೊಂಡು ಹೋದಮೇಲೆ ಕೋಟೆ ಬಾಗಿಲು ಹಾಕಿದರಂತೆ. ಮಿತ್ರ ಪಕ್ಷ ಡಿಎಂಕೆ ಓಲೈಕೆಗಾಗಿ, ತಮಿಳುನಾಡಿಗೆ ನೀರು ಹರಿಸಿ, ಕನ್ನಂಬಾಡಿ ಬರಿದಾದ ಮೇಲೆ, ಸರ್ವಪಕ್ಷಗಳ ಸಭೆ ಕರೆದ ಸರ್ಕಾರದ ನಡೆ ಹಾಸ್ಯಾಸ್ಪದ. ನಮ್ಮ ರೈತರಿಗೆ ವಂಚಿಸಿ, ಪಕ್ಕದ ರಾಜ್ಯಕ್ಕೆ ನೀರು ಹರಿಸಿದ ಕಾಂಗ್ರೆಸ್’ನ ಕ್ರಮ ಮನೆಗೆ ಮಾರಿ, ಪರರಿಗೆ ಉಪಕಾರಿಯಂತಾಗಿದೆ! ಎಂದು ಚಾಟಿ ಬಿಸಿದ್ದಾರೆ.

Previous articleಕಾಂಗ್ರೆಸ್ ಸರ್ಕಾರ ಮಾಡಿದ ಪಾಪಕ್ಕೆ ಅಧಿಕೃತ ಮುದ್ರೆಗಾಗಿ ಸರ್ವ ಪಕ್ಷ ಸಭೆ
Next articleಪಶ್ಚಿಮಘಟ್ಟದಿಂದ ಕೋಲಾರದವರೆಗೆ ನೀರು