ಕಸದ ವಾಹನದಲ್ಲಿ ಆಯುಕ್ತರ ಸಂಚಾರ..!

0
17


ಬೆಳಗಾವಿ: ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಕಸದ ವಾಹನದಲ್ಲಿ ಸಿಟಿ ರೌಂಡ್ ಹಾಕಿದರು.
ಬೆಳ್ಳಂ ಬೆಳಿಗ್ಗೆಯೇ ರೌಂಡ್ಸ ಹೊರಟ ಆಯುಕ್ತರು ದಾರಿಯಲ್ಲಿ ಹೋಗುತ್ತಿದ್ದ ಮನೆ ಮನೆ ಕಸ ತುಂಬುವ ವಾಹನ‌ ಏರಿದರು. ನಂತರ ಪಾಲಿಕೆಯ ವಾಹನ ವಿಭಾಗಕ್ಜೆ ಭೆಟ್ಡಿ ನೀಡಿ ಅಲ್ಲಿನ‌ ವ್ಯವಸ್ಥೆಯನ್ನು ಪರಿಶೀಲಿಸಿದರು .
ನಂತರ ಕಸ ತುಂಬುವ ವಾಹನದಲ್ಲಿಯೇ ಹರಿ ಮಂದಿರದ ವರೆಗೆ ಬಂದರು. ಅಲ್ಲಿಂದ ನಗರಸೇವಕಿ ವಾಣಿ ಜೋಶಿ ಅವರೊಂದಿಗೆ ವಾರ್ಡ ನಂಬರ 43 ರ ಬೇರೆ ಬೇರೆ ಸ್ಥಳಕ್ಕೆ ಭೆಟ್ಟಿ ನೀಡಿದರು. ಅನಗೋಳ ಸ್ಮಶಾನ ಕ್ಕೆ ಭೆಟ್ಟಿ ನೀಡಿದರು. ಅಲ್ಲಿ ಸ್ವಚ್ಚತೆಗೆ ಸಂಬಂಧಿಸಿದಂತೆ ಸೂಚನೆ ನೀಡಿದರು‌. ವಿದ್ಯುತ್ ಸಮಸ್ಯೆ ಬಗ್ಗೆನೂ ತಕ್ಷಣವೇ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡವನ್ನು ಪರಿಶೀಲಿಸಿದರು. ಬಾಗ್ಯನಗರ, ವಿದ್ಯಾನಗರ ಮತ್ತಿತರ ಕಡೆಗೆ ಭೆಟ್ಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು.

Previous articleಜನಶತಾಬ್ದಿ ಎಕ್ಸಪ್ರೆಸ್ ನಿಲುಗಡೆ ಬದಲು
Next articleನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ